ಬೆಂಗಳೂರು : ಬಿಬಿಎಂಪಿ ಶಾಲಾ ಶಿಕ್ಷಕರಿಗೆ ಬೃಹತ್ ಮಹಾನಗರ ಪಾಲಿಕೆ (BBMP) ಗುಡ್ ನ್ಯೂಸ್ ನೀಡಿದ್ದು, ಫಾರಿನ್ ಟ್ರಿಪ್ ಭಾಗ್ಯ ಕಲ್ಪಿಸಿದೆ.
ಹೌದು, ಬಿಬಿಎಂಪಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ನೂರರಷ್ಟು ಫಲಿತಾಂಶ ತಂದುಕೊಡುವ ಶಾಲೆಗಳಿಗೆ ವಿದೇಶ ಪ್ರವಾಸದ ಯೋಗ ಕಲ್ಪಿಸಲು ಬಿಬಿಎಂಪಿ ತೀರ್ಮಾನಿಸಿದೆ.ಈ ಹಿಂದೆ ಸರ್ಕಾರಿ ಶಾಲೆಗಳ ಫಲಿತಾಂಶ ಹೆಚ್ಚಿಸಲು ಬಳ್ಳಾರಿಯಲ್ಲಿ ಮಾಡಲಾಗಿದ್ದ ವಿದೇಶಿ ಪ್ರವಾಸ ಭಾಗ್ಯ ಯೋಜನೆಯನ್ನು ಇದೀಗ ಬಿಬಿಎಂಪಿ ಜಾರಿಗೊಳಿಸಲು ಮುಂದಾಗಿದೆ.
ಬಳ್ಳಾರಿಯಲ್ಲಿ ವಿದೇಶಿ ಪ್ರವಾಸದ ಯೋಜನೆ ಹೆಸರು ಮಾಡಿತ್ತು, ಈ ಯೋಜನೆ ಯಶಸ್ವಿಯಾಗಿ ಅಲ್ಲಿನ ನೂರಾರು ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿತ್ತು. ಈ ಹಿನ್ನೆಲೆ ಬಿಬಿಎಂಪಿ ಕೂಡ ಬಿಬಿಎಂಪಿ ಶಾಲಾ ಶಿಕ್ಷಕರಿಗೆ ಫಾರಿನ್ ಟ್ರಿಪ್ ಭಾಗ್ಯ ಕಲ್ಪಿಸಿದೆ. ಈ ನಿಟ್ಟಿನಲ್ಲಾದರೂ ಮಕ್ಕಳ ಫಲಿತಾಂಶ ಸುಧಾರಿಸಲಿ ಎಂದು ಬಿಬಿಎಂಪಿ ಈ ಯೋಜನೆಗೆ ಜಾರಿಗೆ ತರಲು ತೀರ್ಮಾನಿಸಿದೆ.