ಬೆಂಗಳೂರು: ಶಿಕ್ಷಕರಾಗೋ ಕನಸು ಹೊಂದಿ ಬಿಎಡ್ ವ್ಯಾಸಂಗ ಮಾಡೋದಕ್ಕಾಗಿ ಕೋರ್ಸಿಗೆ ಅರ್ಜಿ ಸಲ್ಲಿಸಿದ್ದರೇ, ನಿಮಗೆ ಮಹತ್ವದ ಮಾಹಿತಿ ಎನ್ನುವಂತೆ 4ನೇ ಸುತ್ತಿನ ಸರ್ಕಾರಿ ಕೋಟಾ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಮಾಹಿತಿ ನೀಡಿದ್ದು, 2023-24ನೇ ಸಾಲಿನ ಬಿಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ 4ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ದಿನಾಂಕ 07-02-2024ರಂದು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಚಲನ್ ಡೌನ್ ಲೋಡ್ ಮಾಡಿಕೊಂಡು, ದಾಖಲಾತಿ ಶುಲ್ಕವನ್ನು ಎಸ್ ಬಿಐ ಬ್ಯಾಂಕಿನಲ್ಲಿ ಪಾವತಿಸಿ ದಿನಾಂಕ 09-02-2024ರ ಒಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಸೆಂಟರ್ ನಲ್ಲಿ ಸಲ್ಲಿಸಿ ಪ್ರವೇಶ ಪತ್ರವನ್ನು ಪಡೆಯುವಂತೆ ತಿಳಿಸಿದೆ.
ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ 12-02-2024 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.schooleducation.karnataka.gov.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಹೇಳಿದೆ.
Good News: ರಾಜ್ಯ ಆರೋಗ್ಯ ಇಲಾಖೆಯ ‘ವೈದ್ಯಕೀಯ ದಾಖಲೆ’ ಡಿಜಿಟಲೀಕರಣ: ಇನ್ಮುಂದೆ ‘ನಿಮ್ಮ ರಿಪೋರ್ಟ್’ ಎಲ್ಲಾ ಕಡೆ ಲಭ್ಯ
BREAKING : ICICI ಬ್ಯಾಂಕ್ ಮಾಜಿ ಸಿಇಒ ‘ಚಂದಾ ಕೊಚ್ಚಾರ್’ ಬಂಧನ ‘ಕಾನೂನು ಬಾಹಿರ’ : ಬಾಂಬೆ ಹೈಕೋರ್ಟ್