ಬೆಂಗಳೂರು : ಇನ್ನೇನು ಕೆಲವೇ ಕ್ಷಣಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ಪಂದ್ಯ ಆರಂಭವಾಗಲಿದ್ದು ಇಡೀ ದೇಶಾದ್ಯಂತ ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ದೇವಸ್ಥಾನಗಳಲ್ಲಿ ಹರಕೆ ಪೂಜೆಗಳನ್ನು ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಈ ಒಂದು ಪಂದ್ಯಾವಳಿಗೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಒಂದು ಕೈಯಲ್ಲಿ ಸಿಂಧೂರ ಹಾಗೂ ಒಂದು ಕೈಯಲ್ಲಿ ಮೇಣದಬತ್ತಿ ಹಿಡಿದು ಪಂದ್ಯಾವಳಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಪೈಲ್ಗಾಮ್ ನಲ್ಲಿ ಉಗ್ರವಾದಿಗಳು ಅಮಾಯಕರನ್ನು ಕೊಂದರು. ಈ ಒಂದು ಘಟನೆ ನಡೆದು ಇನ್ನು ಐದಾರು ತಿಂಗಳು ಸಹ ಆಗಿಲ್ಲ. ಕಣ್ಣೀರು ಇನ್ನು ಹರಿತಾ ಇದೆ. ಮೃತರ ಕುಟುಂಬದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಇಂದು 8 ಗಂಟೆಗೆ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಸುತ್ತಿದ್ದಾರೆ. ಕೇಂದ್ರ ಗೃಹಮಂತ್ರಿ ಮಗ ಅಮಿತ್ ಷಾ ಅವರ ಮಗ ಜಯ್ ಶಾ ಬಿಸಿಸಿಐ ಛೇರ್ಮನ್ ಆಗಿದ್ದು ನಮ್ಮ ಭಾರತೀಯ ಮಹಿಳೆಯರ ಮೇಲೆ ಸ್ವಲ್ಪವಾದರೂ ಕಾಳಜಿ ಇಲ್ಲ. ನಮಗೆ ಇನ್ನು ಹೊಟ್ಟೆ ಉರಿತಾ ಇದೆ.ಅಮಾಯಕರನ್ನ ಯಾರ್ ಕೊಂದಿದ್ದಾರೋ ನಮ್ಮ ಕಣ್ಮುಂದೆ ನಿಲ್ಲಿಸಿ ಶಿಕ್ಷೆ ಕೊಟ್ಟಿದಾರ? ಇಲ್ಲ ನಿಮ್ಮ ಟಿ ಆರ್ ಪಿ ಗೋಸ್ಕರ ನಿಮ್ಮ ದುಡ್ಡಿಗೋಸ್ಕರ ನೀವು ಪಂದ್ಯಾವಳಿ ಆ ಯೋಜನೆ ಮಾಡಿದ್ದೀರಿ ನಿಜವಾಗಲೂ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.