ಹುಬ್ಬಳ್ಳಿ : ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನ) ಯಡಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ 2ನೇ ಹಂತದ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮ ಜನವರಿ 24 ರಂದು ನಡೆಯಲಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ವಸತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಮಂಡಳಿಯು ರಾಜ್ಯಾದ್ಯಂತ ಬರುವ ಮಹಾನಗರ, ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ ಮಂಡಳಿಯ ಕಾಯ್ದೆಯನ್ವಯ ಘೋಷಣೆ ಹೊರಡಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 3025 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 2866 ಪ್ರದೇಶಗಳನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲಾಗಿದ್ದು, ಸದರಿ ಕೊಳಗೇರಿ ಪ್ರದೇಶಗಳಲ್ಲಿ ಮಂಡಳಿ ವತಿಯಿಂದ ಕೊಳಗೇರಿ ಸುಧಾರಣೆ ಯೋಜನೆಯಡಿ ಮೂಲಭೂತ ಸೌಲಭ್ಯ & ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.
ಕೊಳಗೇರಿ ಸುಧಾರಣೆ ಯೋಜನೆ: ರಾಜ್ಯದಲ್ಲಿನ ಘೋಷಿತ ಕೊಳಗೇರಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರವು ಆಯವ್ಯಯದಲ್ಲಿ ಕೊಳಗೇರಿ ಸುಧಾರಣೆ ಯೋಜನೆಯಡಿ ಒದಗಿಸುವ ಅನುದಾನಕ್ಕನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು,ಬೀದಿ ದೀಪ, ಸಮುದಾಯ ಶೌಚಾಲಯ ಮತ್ತು ಸಮುದಾಯ ಭವನ ಮುಂತಾದವುಗಳನ್ನು ಕಲ್ಪಿಸಲಾಗುತ್ತಿದೆ.
ವಸತಿ ಯೋಜನೆ:ಕೊಳಗೇರಿ ಪ್ರದೇಶಗಳಲ್ಲಿ ಕಚ್ಚಾ-ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ iಟಿ siಣu ಮಾದರಿಯಲ್ಲಿ ವಸತಿ ಕಲ್ಪಿಸಲಾಗುತ್ತಿದೆ ಮತ್ತು ವಾಸಕ್ಕೆ ಯೋಗ್ಯವಲ್ಲದ ಪ್ರದೇಶಗಳಾದ ರೈಲ್ವೆ ಹಳಿಗಳ ಪಕ್ಕ, ಹೈಟೆನ್ಸನ್ ಕೆಳಗೆ, ಕೆರೆ ಅಂಗಳ, ರಾಜಕಾಲುವೆ ಪಕ್ಕ ಮುಂತಾದ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಮಂಡಳಿಯ ಕಾಯ್ದೆ 11ರಡಿಯಲ್ಲಿ ಘೋಷಿಸಿ ಸರ್ಕಾರದಿಂದ ಬದಲಿ ಜಮೀನನ್ನು ಪಡೆದು, ಸ್ಥಳಾಂತರಿಸಿ ಖeಟoಛಿಚಿಣioಟಿ ಮಾದರಿಯಲ್ಲಿ ಪುನರ್ ವಸತಿ ಕಲ್ಪಿಸಿ ಕೊಳಗೇರಿ ಮುಕ್ತ ಮಾಡಲು ಕ್ರಮ ವಹಿಸುತ್ತಿದೆ. ರಾಜ್ಯಾದ್ಯಂತ ವಿವಿಧ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ಆಯ್ಕೆ ಘೋಷಿತ ಕೊಳಗೇರಿ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಕೊಳಚೆ ಮುಕ್ತ ಮಾಡಲು ವಾಂಬೆ, ಹುಡೋ ಜೆ.ಎನ್.ಎನ್.ಯು.ಆರ್.ಎಮ್- ರಾಜೀವ್ ಅವಾಸ್ ಯೋಜನೆಯಡಿ ಮೂಲಭೂತ ಸೌಲಭ್ಯಗಳೊಂದಿಗೆ 2000-2001ನೇ ಸಾಲಿನಿಂದ 2015ನೇ ಸಾಲಿನ ವರೆವಿಗೂ ಕೊಳಗೇರಿ ಪ್ರದೇಶಗಳಲ್ಲಿ ಕಚ್ಚಾ – ಸಮಿಪಕ್ಕ ಮನೆಗಳನ್ನು ತೆರವುಗೊಳಿಸಿ ಕೇಂದ್ರ ಪುರಸ್ಕøತ ವಿವಿಧ ವಸತಿ ಯೋಜನೆಗಳಡಿ 1,28,812 ಮನೆಗಳನ್ನು ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. 2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರದ ವಸತಿ ಯೋಜನೆಗಳಾದ ಡಾ.ಅಂಬೇಡ್ಕರ್ ನಿವಾಸ್ ಯೋಜನ & ವಾಜಪೇಯಿ ನಗರ ವಸತಿ ಯೋಜನೆಯ ಸಂಯೋಜನೆಯೊಂದಿಗೆ ಜಾರಿಗೊಳಿಸಿದ್ದು, ಯೋಜನೆಯ
ಮಾರ್ಗಸೂಚಿಯನುಸಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ರಾಜ್ಯಾದ್ಯಂತ ಬರುವ ನಗರ, ಪಟ್ಟಣಗಳಲ್ಲಿನ ಕೊಳಗೇರಿ ಪ್ರದೇಶಗಳಲ್ಲಿ ಕಚ್ಚಾ ಸೆಮಿ ಪಕ್ಕ ಮನೆಗಳ ಬೇಡಿಕೆ ಸಮೀಕ್ಷೆ ಕೈಗೊಂಡಿದ್ದು, ಒಟ್ಟು 4,92,256 ಕುಟುಂಬಗಳನ್ನು ಗುರುತಿಸಲಾಗಿದೆ. ಈ ಪೈಕಿ 1,80,253 ಮನೆಗಳ ನಿರ್ಮಾಣಕ ಮಂಜೂರಾತಿ ನೀಡಿರುವ ಒಟ್ಟಾರೆ ಯೋಜನೆಯ ಮಾರ್ಗಸೂಚಿಯನುಸಾರ ಮಂಜೂರಾದ ಮನೆಗಳ ಘಟಕ ವೆಚ್ಚ ಸರಾಸರಿ ರೂ.7.52 ಲಕ್ಷಗಳಾಗಿದ್ದು (ಜಿ.ಎಸ್.ಟಿ ಒಳಗೊಂಡಂತೆ) ಕೇಂದ್ರ ಸರ್ಕಾರದ ರೂ.1.50 ಲಕ್ಷಗಳು ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಕ್ಕೆ ರೂ.2 ಲಕ್ಷಗಳು ಹಾಗೂ ಇತರೇ ವರ್ಗಕ್ಕೆ ರೂ.1.20 ಲಕ್ಷಗಳು ಮತ್ತು ಫಲಾನುಭವಿಗಳ ವಂತಿಕೆ ಮೊತ್ತವನ್ನು ಫಲಾನುಭವಿಗಳೇ ಸ್ವತಃ ಭರಿಸುವುದು ಅಥವಾ ಬ್ಯಾಂಕ್ ಗಳಿಂದ, ಫಲಾನುಭವಿಗಳ ಹೆಸರಿನಲ್ಲಿ ಸಾಲಸೌಲಭ್ಯ ನಿರ್ಮಾಣವನ್ನು ಪೂರ್ಣಗೊಳಿಸಬೇಕಾಗಿತ್ತು. ಒದಗಿಸಿ ಮನೆಗಳ ಕೊಳಗೇರಿ ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗಕ್ಕೆ ಸೇರಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಕಡುಬಡವರಾಗಿರುವುದರಿಂದ ಸರ್ಕಾರವು ಈ ಯೋಜನೆಗೆ ನಿಗಧಿಪಡಿಸಿರುವ ಫಲಾನುಭವಿ ವಂತಿಕೆಯ ಮೊತ್ತವನ್ನು ಪಾವತಿಸುವುದು ಕಷ್ಟಕರವಾಗಿದ್ದು, ಬ್ಯಾಂಕುಗಳು ಸಾಲ ನೀಡಲು ಮುಂದೆಬಾರದರಿಂದಾಗಿ, ಫಲಾನುಭವಿಗಳ ವಂತಿಕೆ ಪ್ರಮಾಣ ಸರಾಸರಿ ಮನೆಗಳ ಘಟಕ ವೆಚ್ಚದ ಶೇಕಡ 55 ರಷ್ಟಿದ್ದು, ಫಲಾನುಭವಿಗಳು ಪೂರ್ಣಪ್ರಮಾಣದಲ್ಲಿ ಭರಿಸಲಾಗದೇ ಇರುವ ಬಗ್ಗೆ ಮನಗಂಡ ಸರ್ಕಾರವು ಫಲಾನುಭವಿಗಳಿಂದ ಕನಿಷ್ಠ ರೂ.1 ಲಕ್ಷಗಳನ್ನು ಸಂಗ್ರಹಿಸಲು ಮತ್ತು ಬಾಕಿ ಫಲಾನುಭವಿ ವಂತಿಕೆ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ದಿನಾಂಕ 30-12-2023 ರಂದು ಸರ್ಕಾರವು ಆದೇಶ ಹೊರಡಿಸಿ, ಅನುಮೋದನೆ ನೀಡಲಾಗಿರುತ್ತದೆ.
ಅದರನ್ವಯ ಫಲಾನುಭವಿ ವಂತಿಕೆಯ ಒಟ್ಟಾರೆ ಮೊತ್ತ ರೂ.5403 ಕೋಟಿಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂ 767 ಕೋಟಿಗಳು ಸೇರಿ ಒಟ್ಟಾರೆ ರೂ 6170 ಕೋಟೆಗಳನ್ನು ರಾಜ್ಯ ಸರ್ಕಾರದಿಂದ ಭರಿಸಲು ಆದೇಶಿಸಲಾಗಿರುತ್ತದೆ. ಈ ಪೈಕಿ ಫಲಾನುಭವಿಗಳ ವಂತಿಕೆಗೆ ಎದುರಾಗಿ ರೂ.960.75 ಕೊಟೆಗಳನ್ನು ಮತ್ತು ಮೂಲಭೂತ ಸೌಲಭ್ಯ ಒದಗಿಸಲು ರೂ.174.64 ಕೋಟಿಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಳಿಸಲಾದ ಕೇಂದ್ರ, ರಾಜ್ಯ ಮತ್ತು ಫಲಾನುಭವಿ ವಂತಿಕೆಗಾಗಿ ರಾಜ್ಯ ಸರ್ಕಾರದಿಂದ ಅನುದಾನ ಹಾಗೂ ಫಲಾನುಭವಿಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಬಳಸಿಕೊಂಡು ಈ ಯೋಜನೆಯಡಿ ಒಟ್ಟು 86,651 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 42,190 ಮನೆಗಳು ಮತ್ತು ಇತರೆ ವರ್ಗದ 44,461 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಯೋಜನೆಯಡಿ ಪೂರ್ಣಗೊಂಡಿರುವ ಮನೆಗಳ ಪೈಕಿ 36,789 ಮನೆಗಳನ್ನು ಪ್ರಥಮ ಹಂತದಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಯವರಿಂದ ಮಾರ್ಚ್-2024 ರಲ್ಲಿ ಲೋಕಾರ್ಪಣೆ ಮಾಡಲಾಗಿದ್ದು ಪ್ರಸ್ತುತ 42,345 ಮನೆಗಳನ್ನು 2ನೇ ಹಂತದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಮನೆಗಳನ್ನು ಸನ್ಮಾನ್ಯ ಮುಖ್ಯ ಮಂತ್ರಿಯವರ ವಿಶೇಷ ಅನುದಾನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನ) ಯಡಿ ಮನೆಗಳನ್ನು ಪೂರ್ಣಗೊಳಿಸಿ ಕೊಳಗೇರಿಗಳಲ್ಲಿನ ಆರ್ಥಿಕವಾಗಿ ಅಶಕ್ತರಾಗಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಸುಸ್ಥಿರ ಸೂರು ಕಲ್ಪಿಸಿದ್ದು, ಯೋಜನೆಯ ಸರ್ವರಿಗೂ ಸೂರು ಆಶಯವನ್ನು ಯಶಸ್ವಿಗೊಳಿಸಿದಂತಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0: ಪ್ರಸ್ತುತ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ನ್ನು ಸೆಪ್ಟೆಂಬರ್ 2024ರಲ್ಲಿ ಜಾರಿಗೊಳಿಸಿದ್ದು, ಯೋಜನೆಯನ್ನು ರಾಜ್ಯದಲ್ಲಿ ಅನುμÁ್ಠನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಕರಾರು ಒಪ್ಪಂದ (ಒoU) ಮಾಡಿಕೊಳ್ಳಾಗಿರುತ್ತದೆ. ಸರ್ಕಾರದ ಆದೇಶ ದಿನಾಂಕ:23.05.2025 ರನ್ವಯ ಮಾರ್ಗಸೂಚಿಯಲ್ಲಿನ ಮನೆಗಳ ನಿರ್ಮಾಣದ ಮಾದರಿಯನ್ನು ಪರಿಶೀಲಿಸಿ ಅನುμÁ್ಠನಗೊಳಿಸಲು ಮತ್ತು ಮನೆಗಳ ನಿರ್ಮಾಣಕ್ಕೆ ಗುರಿ ನಿಗಧಿಪಡಿಸಿ ಕೊಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳ ವಿತರಣೆ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳ ಮತ್ತು ಸರ್ಕಾರದ ಮಾಲೀಕತ್ವಕ್ಕೆ ಒಳಪಡುವ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ 20,275 ಕೊಳಗೇರಿ ಕುಟುಂಬಗಳಿಗೆ ಈ ದಿವಸ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಕೊಳಗೇರಿ ನಿವಾಸಿಗಳು ನೆಮ್ಮದಿಯುತ ಜೀವನ ನಡೆಸಲು ಸಹಕಾರಿಯಾಗಿದೆ.
ವಸತಿ ರಹಿತರ ಕನಸಿನ ಸೂರಿಗೆ ಆಸರೆಯ ಬೆಳಕಾದ ಗ್ಯಾರಂಟಿ ಸರ್ಕಾರ
ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ 2ನೇ ಹಂತದ 42,345 ಮನೆಗಳ ಲೋಕಾರ್ಪಣೆ ಹಾಗೂ ಮಂಡಳಿಯ ಸುವರ್ಣ… pic.twitter.com/QIwwW3DlOe
— DIPR Karnataka (@KarnatakaVarthe) January 23, 2026








