ಬೆಂಗಳೂರು: ರಾಜ್ಯದ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವದನ್ನು ಪ್ರೋತ್ಸಾಹಿಸಲು ರಾಷ್ಟ್ರದಲ್ಲೇ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಜುಲೈ.28ಕ್ಕೆ ಚಾಲನೆ ನೀಡಲಾಗುತ್ತದೆ.
ಈ ಕುರಿತಂತೆ ಮಾಹಿತಿ ನೀಡಿದಂತ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ದತ್ತು ಯೋಜನೆ ( ಅಡಾಪ್ಟ್) ಪೋರ್ಟಲ್ ಅನ್ನು ಜುಲೈ.28ಕ್ಕೆ ಉದ್ಘಾಟಿಸಲಿದ್ದಾರೆ. ಈ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸರ್ಕಾರಿ ಅಥವಾ ಖಾಸಗಿ ಸಾರ್ವಜನಿಕರು ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ವಾರ್ಷಿಕ ತಲಾ 11 ಸಾವಿರ ರೂ ದೇಣಿಗೆ ನೀಡುವ ಮೂಲಕ ದತ್ತು ಪಡೆಯಬಹುದಾಗಿ ಎಂದರು.
ರಾಜ್ಯ ರಾಜಕೀಯದಲ್ಲಿ ‘ನಿವೃತ್ತಿ’ಯ ಬಗ್ಗೆ ಬಿಸಿ ಬಿಸಿ ಚರ್ಚೆ: 92ರಲ್ಲೂ ನಿವೃತ್ತಿಯಿಲ್ಲವೆಂದ ಮಾಜಿ ಸಚಿವ
ಅಂದಹಾಗೇ ರಾಜ್ಯದಲ್ಲೇ ಮೊದಲ ಬಾರಿಗೆ ವಿಶಿಷ್ಟ ರೀತಿಯ ಗೋ ದತ್ತು ಯೋಜನೆ ಇದಾಗಿದೆ. ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಚಿಕಿತ್ಸಾ ವಾಹನ ವ್ಯವಸ್ಥೆಯಿದೆ. ವಾರ್ಷಿಕ 11 ಸಾವಿರ ರೂಪಾಯಿ ಪಾವತಿಸಿ, ಸಾರ್ವಜನಿಕರು, ಖಾಸಗಿಯವರು ಗೋವನ್ನು ದತ್ತು ಪಡೆಯಬಹುದಾಗಿದೆ.