ಬೆಂಗಳೂರು: ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದ ಎರಡು ದಿನಗಳ ಬಳಿಕ, ಕೆಎಂಎಫ್ ಹೊಸ ದಾಖಲೆ ಬರೆದಿದೆ. ಅದೇ 1 ಕೋಟಿ ಲೀಟರ್ ಗಡಿಯನ್ನು ಹಾಲಿನ ಸಂಗ್ರಹಣೆಯಲ್ಲಿ ಬರೆದಿದೆ.
ರಾಜ್ಯ ಸರ್ಕಾರದಿಂದ ಈ ಮಾಹಿತಿ ಹಂಚಿಕೊಂಡಿದ್ದು, ನಂದಿನಿಯಿಂದ ಹಸನಾದ ಹೈನುಗಾರಿಕೆಯನ್ನು ನಡೆಸಲಾಗುತ್ತಿದೆ. 1 ಕೋಟಿಗೂ ಹೆಚ್ಚು ಲೀಟರ್ ದಾಖಲೆಯ ಪ್ರಮಾಣದ ಹಾಲಿನ ಸಂಗ್ರಹಣವನ್ನು ಜೂನ್.28ರಂದು ಮಾಡಿದೆ ಎಂದಿದೆ.
ಕೆಎಂಎಫ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ 1 ಕೋಟಿ ಲೀಟರ್ ಜೂನ್.28, 2024ರಂದು ದಾಟಿದೆ. ರಾಜ್ಯ ಸರ್ಕಾರ ಹೈನುಗಾರಿಕೆಯ ರೈತರಿಗೆ ನೀಡಿದ ಪ್ರೋತ್ಸಾಹವೇ ಇದಕ್ಕೆ ಕಾರಣ. ರೈತರ ಬದುಕಿಗೆ ಆರ್ಥಿಕ ಚೈತನ್ಯ ತುಂಬುವುದೇ ಸರ್ಕಾರದ ಆದ್ಯತೆ ಅಂತ ತಿಳಿಸಿದೆ.
ಕೆ.ಎಂ.ಎಫ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ 1 ಕೋಟಿ ಲೀಟರ್ (ಜೂನ್ 28, 2024) ದಾಟಿದೆ. ರಾಜ್ಯ ಸರ್ಕಾರ ಹೈನುಗಾರಿಕೆಯ ರೈತರಿಗೆ ನೀಡಿದ ಪ್ರೋತ್ಸಾಹವೇ ಇದಕ್ಕೆ ಕಾರಣ. ರೈತರ ಬದುಕಿಗೆ ಆರ್ಥಿಕ ಚೈತನ್ಯ ತುಂಬುವುದೇ ಸರ್ಕಾರದ ಆದ್ಯತೆ.#KMF #Nandini@CMofKarnataka@siddaramaiah pic.twitter.com/velg5c89pn
— DIPR Karnataka (@KarnatakaVarthe) June 29, 2024
BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’