ಬೆಂಗಳೂರು: ಮೈಸೂರು ರಿಂಗ್ ರಸ್ತೆಯ (ಎನ್ಎಚ್-275 ಕೆ) ಕೆಳ ಸೇತುವೆ ಸಂಖ್ಯೆ 293-ಎ (ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಬೈಪಾಸ್ ರೈಲ್ವೆ ನಿಲ್ದಾಣ ನಡುವೆ) ನಲ್ಲಿ ಸರ್ವಿಸ್ ರಸ್ತೆಯೊಂದಿಗೆ ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಈ ಕೆಳಗಿನ ರೈಲುಗಳನ್ನು ಬೆಳಗುಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
1. ಫೆಬ್ರವರಿ 20 ಮತ್ತು 22, 2025 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಬೆಳಗುಳ-ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬೆಳಗುಳದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ.
2. ಫೆಬ್ರವರಿ 20 ಮತ್ತು 22, 2025 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು ಮತ್ತು ಬೆಳಗುಳ ನಡುವೆ ಭಾಗಶಃ ರದ್ದಾಗಿದೆ. ಇದು ಮೈಸೂರಿನ ಬದಲು ಬೆಳಗುಳದಿಂದ ನಿಗದಿತ ಸಮಯಕ್ಕೆ ಹೊರಡಲಿದೆ.
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿ ಕೊಳ್ಳಬೇಕು ಅಂತ ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement
BREAKING NEWS : ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ