ಬೆಂಗಳೂರು: ಬೆಂಗಳೂರು ವಿಭಾಗದ ಹೆಬ್ಬಾಳ ಮತ್ತು ಲೊಟ್ಟೆಗೊಲ್ಲಹಳ್ಳಿ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 148 ಮತ್ತು 152ರ ಬದಲಿಗೆ ರಸ್ತೆ ಕೆಳ ಸೇತುವೆಯ ಅಗತ್ಯ ನಿರ್ಮಾಣ ಕಾಮಗಾರಿಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳನ್ನು ಈ ಕೆಳಗಿನಂತೆ ಮಾರ್ಗ ಬದಲಾವಣೆ ಮತ್ತು ಮರು ವೇಳಾಪಟ್ಟಿನಿಗದಿಪಡಿಸಲಾಗುತ್ತಿದೆ: ಅವುಗಳ ಮಾಹಿತಿ ಈ ಕೆಳಗಿನಂತಿವೆ:
ರೈಲು ಮಾರ್ಗ ಬದಲಾವಣೆ: ಜನವರಿ 26 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16565 ಯಶವಂತಪುರ-ಮಂಗಳೂರು ಸೆಂಟ್ರಲ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಬಾನಸವಾಡಿಯಲ್ಲಿ ನಿಯಮಿತ ನಿಲುಗಡೆಯನ್ನು ಬಿಟ್ಟು ಯಲಹಂಕ, ಚನ್ನಸಂದ್ರ ಮತ್ತು ಕೃಷ್ಣರಾಜಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ರೈಲುಗಳ ಮರು ವೇಳಾಪಟ್ಟಿ:
1. ಫೆಬ್ರವರಿ 22 ಮತ್ತು ಮಾರ್ಚ್ 01, 2025 ರಂದು ರೈಲು ಸಂಖ್ಯೆ 00630 ತುಘಲಕಾಬಾದ್-ಯಶವಂತಪುರ ಪಾರ್ಸೆಲ್ ಕಾರ್ಗೋ ಎಕ್ಸ್ ಪ್ರೆಸ್ ರೈಲು ತುಘಲಕಾಬಾದ್ ನಿಲ್ದಾಣದಿಂದ 300 ನಿಮಿಷ ತಡವಾಗಿ ಹೊರಡಲಿದೆ.
2. ಫೆಬ್ರವರಿ 25 ಮತ್ತು ಮಾರ್ಚ್ 04, 2025 ರಂದು ರೈಲು ಸಂಖ್ಯೆ 00629 ಯಶವಂತಪುರ-ತುಘಲಕಾಬಾದ್ ಪಾರ್ಸೆಲ್ ಕಾರ್ಗೋ ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ 300 ನಿಮಿಷ ತಡವಾಗಿ ಹೊರಡಲಿದೆ.
ಆನ್‌ಲೈನ್ ಗೇಮ್ ಆಡಬೇಡವೆಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat