ಮೈಸೂರು : ಮೈಸೂರು ಜಿಲ್ಲೆ ಟಿ ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರವಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಮೈಸೂರಿನಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ರೇಷ್ಮೆ ಕಾರ್ಖಾನೆಯಲ್ಲಿ ನಮ್ಮ ಕ್ಷೇತ್ರದ ಜನರೇ ಕೆಲಸ ಮಾಡುತ್ತಿದ್ದಾರೆ. ನಾವು ಯಾಕೆ ರೇಷ್ಮೆ ಕಾರ್ಖಾನೆ ಮುಚ್ಚುತ್ತೇವೆ. ಸುಮ್ಮನೆ ಕೆಲವರು ಸುಳ್ಳು ಹೇಳಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಂದ ತಾಂತ್ರಿಕ ವರದಿ ಕೇಳಿದ್ದೇವೆ. ಕ್ರೀಡಾಂಗಣದಿಂದ ತೊಂದರೆಯಾದರೆ ಬೇರೆ ಜಾಗ ಹುಡುಕುತ್ತೇವೆ. ನಮಗೆ ಕಾರ್ಖಾನೆಯೂ ಮುಖ್ಯ ಕ್ರೀಡಾಂಗಣವು ಮುಖ್ಯವಾಗಿದೆ. ಕ್ರೀಡಾಂಗಣಕ್ಕಾಗಿ ಕಾರ್ಖಾನೆಯನ್ನು ಎಂದಿಗೂ ಮುಚ್ಚುವುದಿಲ್ಲ ಎಂದು ಮೈಸೂರಿನಲ್ಲ ಯತಿಂದ್ರ ಸಿದ್ಧರಾಮಯ್ಯ ಹೇಳಿಕೆ ನೀಡಿದರು.








