ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಹಾಸ್ಯಸ್ಪದ ಘಟನೆಗಳು ನಡೆಯುತ್ತಿರುತ್ತವೆ. ಅಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ.
ಬಾಗ್ನಾಲ್ ಎಂಬ ವ್ಯಕ್ತಿ ಆನ್ ಲೈನ್ ನಲ್ಲಿ ಆಹಾರವನ್ನು ಆಡರ್ ಮಾಡಿದ್ದರು. ಆಡರ್ ಮಾಡಿದ ಆಹಾರವನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸಿದಾಗ, ಡೆಲಿವರಿ ಏಜೆಂಟ್ ತಾನು ಈಗಾಗಲೇ ಅದನ್ನು ತಿಂದಿದ್ದೇನೆ ಮತ್ತು ಆಹಾರವು ರುಚಿಕರವಾಗಿದೆ ಎಂದು ಮೆಸೇಜ್ ಮಾಡಿದ್ದಾನೆ. ಈ ಘಟನೆಯನ್ನು ಯುಕೆಯಲ್ಲಿರುವ ವ್ಯಕ್ತಿಯೊಬ್ಬರು ವರದಿ ಮಾಡಿದ್ದಾರೆ.
Deliveroo driver has gone rogue this morning pic.twitter.com/sFNMUtNRrk
— Bags (@BodyBagnall) October 28, 2022
ಟ್ವಿಟ್ಟರ್ ಬಳಕೆದಾರ @BodyBagnall ಅದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನಿಜವಾಗಿ ಏನಾಯಿತು ಎಂದು ವಿವರಿಸಿದ್ದಾರೆ. ಆನ್ಲೈನ್ ಆಹಾರ ವಿತರಣಾ ಸೇವೆ ಡೆಲಿವರೂ ಮೂಲಕ ಆಹಾರದ ಆರ್ಡರ್ ಮಾಡಿದ್ದಾರೆ. ಆದರೆ ಆಹಾರವನ್ನು ಸ್ವೀಕರಿಸುವ ಬದಲು, ಅವರು ಡೆಲಿವರಿ ಏಜೆಂಟ್ನಿಂದ ಕ್ಷಮಿಸಿ ಎಂಬ ಪಠ್ಯವನ್ನು ಸ್ವೀಕರಿಸಿದರು. ನಂತರ ಅವರು ಏನಾಯಿತು ಎಂದು ಕೇಳಿದಾಗ, ಈ ಆಹಾರವು ತುಂಬಾ ರುಚಿಕರವಾಗಿದೆ. ನಾನು ಇದನ್ನು ತಿನ್ನುತ್ತೇನೆ ಎಂದು ಏಜೆಂಟ್ ಉತ್ತರಿಸಿದ್ದಾನೆ. ಬಳಿಕ ಏಜೆಂಟ್ ವ್ಯಕ್ತಿಗೆ ನೀವು ಡೆಲಿವರೂ ಕಂಪನಿಗೆ ಈ ಬಗ್ಗೆ ವರದಿ ಮಾಡಬಹುದು ಎಂದು ಹೇಳಿದ್ದಾನೆ.
ಬಾಗ್ನಾಲ್ ಸಂಪೂರ್ಣ ವಿನಿಮಯದ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಅನೇಕರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ.