ತೆಲಗಾಂಣ: ರಾಜ್ಯದ ಮಾಧಾಪುರ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ತೆರೆದ ಕಸದ ಬುಟ್ಟಿಗಳು ಪತ್ತೆಯಾಗಿವೆ ಎಂದು ತೆಲಂಗಾಣ ಆಹಾರ ಸುರಕ್ಷತಾ ಇಲಾಖೆ ಹೇಳಿದ್ದಾರೆ. ಈ ನಡುವೆ ಕೆಫೆ ಮಾಲೀಕರು ಆಂತರಿಕ ತನಿಖೆಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ತೆಲಂಗಾಣದ ಆಹಾರ ಸುರಕ್ಷತಾ ಇಲಾಖೆಯು ರಾಮೇಶ್ವರಂ ಕೆಫೆ ಮತ್ತು ಬಾಹುಬಲಿ ಕಿಚನ್ ಸೇರಿದಂತೆ ಹಲವಾರು ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿದ್ದು, ಹಲವಾರು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದರಲ್ಲಿ ಅವಧಿ ಮೀರಿದ ಉದ್ದಿನ ಬೇಳೆ, ಮೊಸರು, ಹಾಲು ಮತ್ತು ಹೆಚ್ಚಿನವುಗಳ ಉಪಸ್ಥಿತಿಯೂ ಸೇರಿದೆ ಎನ್ನಲಾಗಿದೆ.