ಕಲಬುರ್ಗಿ : ಬಡವರಿಗಾಗಿಯೇ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದ್ದು ಆದರೆ ಕೆಲ ಮಧ್ಯವರ್ತಿಗಳು ಹಾಗೂ ಪಡಿತರ ಅಕ್ಕಿ ವಿತರಕರು ಅಕ್ರಮವಾಗಿ ಅಕ್ಕಿಯನ್ನು ಸಂಗ್ರಹಿಸಿದ್ದು, ಇದೀಗ ಕಲ್ಬುರ್ಗಿಯಲ್ಲಿ ಆಹಾರ ಅಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಗೋದಾಮಿನ ಮೇಲೆ ದಾಳಿ ನಡೆಸಿ ಸುಮಾರು 180ಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಗ್ರಾಹಕರ ಗಮನಕ್ಕೆ ಏಪ್ರಿಲ್ 1 ರಿಂದ ಬದಲಾಗಲಿವೆ ಈ ಬ್ಯಾಂಕುಗಳ ‘ಕ್ರೆಡಿಟ್ ಕಾರ್ಡ್’ ಗಳ ನಿಯಮಗಳು!
ಹೌದು ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ ಗೋದಾಮಿನ ಮೇಲೆ ದಾಳಿ ನಡೆಸಿದ್ದು, ಕಲಬುರ್ಗಿಯ ಎರಡು ಕಡೆ ಪ್ರತ್ಯೇಕವಾಗಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ 180 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೋದಮ ಮತ್ತು ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಶೇಖರಣೆ ಮಾಡಿದ್ದ ಅಕ್ಕಿಯನ್ನು ಇದೀಗ ಅಧಿಕಾರಿಗಳು ಜಪ್ತಿ ಮಾಡಿದ್ದರೆ. ಕಲಬುರ್ಗಿ ನಗರದ ಸೋನಿಯಾ ಗಾಂಧಿ ಕಾಲೋನಿಯ ಗುಲಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಸಂಗ್ರಹಿಡಲಾಗಿತ್ತು. ಅಲ್ಲದೆ ರಾಜೀವ್ ಗಾಂಧಿ ಆಶ್ರಯ ಕಾಲೋನಿ ಮನೆಯಲ್ಲಿ ಕೂಡ ಅಕ್ರಮ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದರು.
ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಮನೆಯಲ್ಲಿ 100 ಕ್ವಿಂಟಲ್ ಪಡಿತರ ಹಾಕಿ ಅಕ್ರಮವಾಗಿ ಶೇಖರಣೆ ಮಾಡಲಾಗಿತ್ತು ಎಂಬ ಮಾಹಿತಿ ಬಂದ ತಕ್ಷಣ, ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರಿಂದ ಜಂಟಿ ಕಾರ್ಯ ಆಚರಣೆ ನಡೆಸಲಾಗಿತ್ತು. ಕಲ್ಬುರ್ಗಿಯ ವಿಶ್ವವಿದ್ಯಾಲಯ ಮತ್ತು ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.