ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆಯಲ್ಲಿ ದಾವಣಗೆರೆ ವಿವಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ನಾಳೆ ದಾವಣಗೆರೆ ವಿಶ್ವ ವಿದ್ಯಾಲಯಕ್ಕೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನರಾದ ಹಿನ್ನಲೆಯಲ್ಲಿ ದಾವಣಗೆರೆ ವಿವಿಯ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ನಾಳೆ ವಿವಿ, ಸ್ವಾಯತ್ತ, ಸ್ನಾತಕೋತ್ತರ ಕೇಂದ್ರಗಳಿಗೂ ರಜೆಯನ್ನು ಘೋಷಿಸಿ ವಿವಿಯ ಕುಲಪತಿ ಪ್ರೊ.ಬಿ.ಡಿ ಕುಂಬಾರ್ ಆದೇಶಿಸಿದ್ದಾರೆ.
ಅಂದಹಾಗೇ 6 ಸಲ ಶಾಸಕರು ಹಾಗೂ ಒಂದು ಸಲ ಸಂಸದರಾಗಿಯೂ ಶಾಮನೂರು ಶಿವಶಂಕರಪ್ಪ ಆಯ್ಕೆಯಾಗಿದ್ದರು. 1997ರಲ್ಲಿ ರಾಜೀನಾಮೆ ನೀಡಿದ್ದಂತ ಅವರು, ದಾವಣಗೆರೆ ಸಂಸದರಾಗಿಯೂ ಆಯ್ಕೆಯಾಗಿದ್ದರು.
1999ರ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಸೋಲು ಕಂಡಿದ್ದರು. ಐದು ದಶಕಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿ ಮಾತ್ರವೇ ಸೋಲು ಕಂಡಿದ್ದರು.
2004, 2008, 2013, 2018, 2023ರಲ್ಲಿ ಶಾಮನೂರು ಶಿವಶಂಕರಪ್ಪ ಅವರು ಶಾಸಕರಾಗಿ ಆಯ್ಕೆಯಾಗಿದ್ದರೇ, 1997ರಲ್ಲಿ ಸಂಸದರಾಗಿದ್ದರು. 1994ರಲ್ಲಿ ಕಾಂಗ್ರೆಸ್ ನಿಂದ ದಾವಣಗೆರೆ ವಿಧಾನಸಭೆಗೆ ಟಿಕೆಟ್ ಪಡೆದು ಕಣಕ್ಕೆ ಇಳಿದಿದ್ದರು. ಇಂತಹ ಅವರು ಇನ್ನಿಲ್ಲವಾಗಿದ್ದಾರೆ.
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam








