ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚೆಗೆ ಮಧುಮೇಹ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಇದರಿಂದ ಅನೇಕ ಸಮಸ್ಯೆಗಳನ್ನ ಅನುಭವಿಸಬೇಕಾಗಿದೆ.ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸರ್ಚ್ ಇತ್ತೀಚೆಗೆ ಕೈಗೊಂಡ ಅಧ್ಯಯನದ ಪ್ರಕಾರ, ಭಾರತವು ಜಗತ್ತಿನ ಎರಡನೇ ಅತಿದೊಡ್ಡ ವಯಸ್ಕ ಮಧುಮೇಹಿಗಳ ಜನಸಂಖ್ಯೆಯನ್ನು ಹೊಂದಿದೆ.
BIGG NEWS: KPTCL ಪರೀಕ್ಷೆಯಲ್ಲಿ ಅಕ್ರಮ; ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿಯ ಬಂಧನ
ಹೈಪೋಗ್ಲೈಸೀಮಿಯಾದ ಸಮಸ್ಯೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿಷಯವೇ ಆಗಿದೆ. ಇದು, ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಸಾಧಾರಣ ಶ್ರೇಣಿಗಿಂತ ಕಡಿಮೆ ಇರುವಂತಹ ಪರಿಸ್ಥಿತಿಯಾಗಿದೆ. ಕಡಿಮೆ ರಕ್ತಲ್ಲಿನ ಗ್ಲುಕೋಸ್ ಮಟ್ಟವನ್ನು ಇನ್ಸುಲಿನ್ ಪ್ರತಿಕ್ರಿಯೆ ಅಥವಾ ಇನ್ಸುಲಿನ್ ಶಾಕ್ ಎಂದೂ ಕರೆಯಲಾಗುತ್ತದೆ.
ರಕ್ತದಲ್ಲಿನ ಗ್ಲುಕೋಸ್ ಮಟ್ಟ ಕಡಿಮೆಯಾಗುವುದು ಪ್ರತಿಯೊಬ್ಬ ವ್ಯಕ್ತಿಯ ಪ್ರತಿಕ್ರಿಯೆ ವಿಭಿನ್ನವಾಗಿದ್ದರೂ, ಕಡಿಮೆ ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಸಾಮಾನ್ಯ ಸೂಚಕಗಳು ಭಯ ಅಥವಾ ಆತಂಕ, ಬೆವರುವಿಕೆ, ನಡುಕ ಮತ್ತು ತೇವಾಂಶ, ಇರಿಸುಮುರುಸು ಅಥವಾ ಅಸಹನೆ, ಶೀಘ್ರ ಹೃದಯಬಡಿತ, ತಲೆಹಗುರಾಗಿರುವಿಕೆ ಅಥವಾ ತಲೆಸುತ್ತುವಿಕೆ ಮುಂತಾದವನ್ನು ಒಳಗೊಂಡಿರಬಹುದು.
BIGG NEWS: KPTCL ಪರೀಕ್ಷೆಯಲ್ಲಿ ಅಕ್ರಮ; ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿಯ ಬಂಧನ
ಹೈಪೋಗ್ಲೈಸೀಮಿಯಾ ಏರ್ಪಡುವ ಅತ್ಯಂತ ಸಾಮಾನ್ಯ ಪರಿಸ್ಥಿತಿ ಎಂದರೆ ಆಹಾರಸೇವನೆಯನ್ನು ತಪ್ಪಿಸಿಕೊಂಡಾಗ. ಆದ್ದರಿಂದ, ಹೈಪೋಗ್ಲೈಸೀಮಿಯಾದ ಎಪಿಸೋಡ್ಗಳನ್ನು ತಡೆಗಟ್ಟಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಹೆಚ್ಚುವರಿಯಾಗಿ, ಭಾರತದಲ್ಲಿ ಕೈಗೊಂಡ ಒಂದ ಅಧ್ಯಯನದ ಪ್ರಕಾರ, ಬಿಜಿ ಶೆಡ್ಯೂಲ್ಗಳಿಂದಾಗಿ ಬೇರೆ ಬೇರೆ ಸಮಯಗಳಲ್ಲಿ ಆಹಾರ ಸೇವಿಸುವುದರಿಂದ ಅವರು ಹೈಪೋಗ್ಲೈಸೀಮಿಯಾದ ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.