ಕೆಎನ್ ಎನ್ ನ್ಯೂಸ್ ಡೆಸ್ಕ್ : ಜೀವನದಲ್ಲಿ ಪ್ರತಿಯಬ್ಬರಿಗೂ ಕಷ್ಟ ಅನ್ನೋದು ಇದ್ದೆ ಇರುತ್ತದೆ. ಇದರಿಂದ ಅದೆಷ್ಟೋ ಮಂದಿ ಜೀವನದಲ್ಲಿ ಜಿಗುಪ್ಸೆ ಬಂದು ಖಿನ್ನತೆ ಒಳಗಾಗುತ್ತಾರೆ. ಮುಂದಿನ ದಿನಗಳಲ್ಲಿ ಅದೇ ಖಿನ್ನತೆಯಿಂದ ಆತ್ಮಹತ್ಯೆಯಂತ ಕೆಟ್ಟ ಯೋಚನೆ ಬರುತ್ತದೆ.
ನಾನು ಜೀವಂತವಾಗಿರುವುದರ ಅರ್ಥವೇನು? ಇದರಿಂದ ಹೊರಗೆ ಬರುವುದಕ್ಕೆ ಆಗುವುದಿಲ್ಲ. ಹೀಗಾಗಿ ಕೆಲ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಹೊಂದಿರುವವರು ಸಾಕಷ್ಟು ಭಾವನಾತ್ಮಕ ನೋವಿನಿಂದ ಬಳಲುತ್ತಿದ್ದಾರೆ ಎಂದರ್ಥ. ನೋವನ್ನು ಸಹಿಸಲಾಗದೆ, ಇನ್ನು ಸಾವೇ ಪರಿಹಾರ ಎಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಾರೆ. ಇಂದು ನೀವು ಹೇಗೆ ಭಾವಿಸುತ್ತೀರಿ, ನಾಳೆ ಅದೇ ಆಗದಿರಬಹುದು. ಆದ್ದರಿಂದ ನಿಮ್ಮ ತಾತ್ಕಾಲಿಕ ಭಾವನೆಗಾಗಿ, ಒಳ್ಳೆಯ ಜೀವನವನ್ನು ವ್ಯರ್ಥವಾಗಿ ಕೊನೆಗೊಳಿಸಬೇಡಿ.ಇಲ್ಲಿದೆ ಕೆಲ ಸಲಹೆಗಳು
* ದಿನನಿತ್ಯ ನಿಮ್ಮ ಆತ್ಮೀಯರೊಂದಿಗೆ ಮಾತನಾಡಿ. ಅವರು ನಿಮಗೆ ನೇರವಾಗಿ ಭೇಟಿಯಾಗಲು ಆದ್ಯತೆ ನೀಡಿ ಅದೂ ಸಾಧ್ಯವಾಗದಿದ್ದರೆ ಫೋನ್ನಲ್ಲಿ ಮಾತನಾಡಿ. ನಿಮ್ಮ ಎಲ್ಲಾ ನೋವುಗಳನ್ನು ಅವರ ಬಳಿ ಹಂಚಿಕೊಳ್ಳಿ.
*ನಿಮ್ಮ ಆತ್ಮೀಯ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ.
*ಸುರಕ್ಷತಾ ಯೋಜನೆಯೊಂದನ್ನು ರಚಿಸಿ.
*ನಿಮ್ಮ ವೈದ್ಯರು, ಮುಖ್ಯವಾದ ಕಾಂಟಾಕ್ಟ್ ನಂಬರ್ಗಳು, ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಮಾಹಿತಿಯನ್ನು ಇದು ಒಳಗೊಂಡಿರಬೇಕು.
* ಪ್ರತಿ ದಿನ ನಿಮಗಾಗಿ ಲಿಖಿತ ವೇಳಾಪಟ್ಟಿಯನ್ನು ತಯಾರು ಮಾಡಿಕೊಳ್ಳಿ
* ಪ್ರತಿ ದಿನ ಕನಿಷ್ಠ 30 ನಿಮಿಷ ಬಿಸಿಲಿನಲ್ಲಿ ಇರಿ ಅಥವಾ ಉದ್ಯಾನವನಕ್ಕೆ ಹೋಗಿ ಲಘು ವಾಕಿಂಗ್ ಮಾಡಿ