ನವದೆಹಲಿ: ದೇಶವು ಸ್ವಾವಲಂಬಿಯಾಗಲು ಮತ್ತು ಕೃಷಿ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯನ್ನು ಆಧುನೀಕರಿಸಲು ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗದ ಪ್ರಬಲ ಪ್ರತಿಪಾದನೆ ಮಾಡಿದ್ದಾರೆ.
ಆಮದು ಕಡಿಮೆ ಮಾಡುವ ಮತ್ತು ರಫ್ತು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ 3T(ಟ್ರೇಡ್-ವ್ಯಾಪಾರ, ಟೂರಿಸಂ-ಪ್ರವಾಸೋದ್ಯಮ, ಟೆಕ್ನಾಲಜಿ-ತಂತ್ರಜ್ಞಾನ) ಗಳನ್ನು ಉತ್ತೇಜಿಸುವತ್ತ ಗಮನಹರಿಸುವಂತೆ ಪ್ರಧಾನಮಂತ್ರಿ ಅವರು ರಾಜ್ಯಗಳಿಗೆ ಕರೆ ನೀಡಿದ್ದಾರೆ ಎಂದು NITI ಆಯೋಗ್ನ ಆಡಳಿತ ಮಂಡಳಿಯ ಏಳನೇ ಸಭೆಯ ನಂತರ ಅಧಿಕೃತ ಪ್ರಕಟಣೆ ತಿಳಿಸಿದೆ.
ಸಾಧ್ಯವಾದಾಗಲ್ಲೆಲ್ಲಾ ಸ್ಥಳೀಯ ವಸ್ತುಗಳನ್ನು ಬಳಸಲು ನಾವು ಜನರನ್ನು ಪ್ರೋತ್ಸಾಹಿಸಬೇಕು. ‘ಸ್ಥಳೀಯರಿಗೆ ಧ್ವನಿ’ ಎನ್ನುವುದು ವೈಯಕ್ತಿಕ ರಾಜಕೀಯ ಪಕ್ಷದ ಕಾರ್ಯಸೂಚಿಯಲ್ಲ. ಆದರೆ, ಅದು ಸಾಮಾನ್ಯ ಗುರಿಯಾಗಿದೆ. ಭಾರತವು ಆಧುನೀಕರಿಸಿದ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯಲ್ಲಿ ಸ್ವಾವಲಂಬಿಯಾಗಲು ಮತ್ತು ಕೃಷಿ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ಗಮನಹರಿಸಬೇಕು. ಕ್ಷಿಪ್ರ ನಗರೀಕರಣವು ದೌರ್ಬಲ್ಯದ ಬದಲಿಗೆ ಭಾರತದ ಶಕ್ತಿಯಾಗಬಲ್ಲದು ಎಂದಿದ್ದಾರೆ. ಇನ್ನೂ, ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಸಹಕರಿಸಿದ ಎಲ್ಲಾ ರಾಜ್ಯಗಳ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.
ಹೆಚ್ಚುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹಣೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯಗಳ ಒಟ್ಟಾಗಿ ಶ್ರಮಿಸುವ ಅಗತ್ಯವಿದೆ. ಇದು ನಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು 5 ಟ್ರಿಲಿಯನ್ ಡಾಲರ್ಗೆ ಆರ್ಥಿಕತೆಯನ್ನು ಕೊಂಡೊಯ್ಯಲು ಅತ್ಯಗತ್ಯ. ಈ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಮುಂದಿನ 25 ವರ್ಷಗಳ ರಾಷ್ಟ್ರೀಯ ಆದ್ಯತೆಗಳನ್ನು ವ್ಯಾಖ್ಯಾನಿಸುತ್ತವೆ. “ನಾವು ಇಂದು ಬಿತ್ತುವ ಬೀಜಗಳು 2047 ರಲ್ಲಿ ಭಾರತವು ಕೊಯ್ಲು ಮಾಡುವ ಫಲವನ್ನು ವ್ಯಾಖ್ಯಾನಿಸುತ್ತದೆ” ಎಂದರು.
2023 ರಲ್ಲಿ ಭಾರತದ G20 ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಪ್ರಧಾನಿ, “ನಾವು G20 ಸುತ್ತಲೂ ಸಾಮೂಹಿಕ ಚಳುವಳಿಯನ್ನು ಅಭಿವೃದ್ಧಿಪಡಿಸಬೇಕು. ಇದು ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಲು ನಮಗೆ ಅನುವು ಮಾಡಿಕೊಡುತ್ತದೆ” ಎಂದರು.
ಸಭೆಯಲ್ಲಿ 23 ಮುಖ್ಯಮಂತ್ರಿಗಳು, 3 ಲೆಫ್ಟಿನೆಂಟ್ ಗವರ್ನರ್ಗಳು ಮತ್ತು 2 ಆಡಳಿತಾಧಿಕಾರಿಗಳು ಮತ್ತು ಕೇಂದ್ರ ಸಚಿವರು ಭಾಗವಹಿಸಿದ್ದರು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಚಾಲಕರಾಗಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆ ಸಿ ರಾವ್ ಅವರು ಸಭೆಗೆ ಗೈರಾಗಿದ್ದರು.
ಯಾತ್ರಾರ್ಥಿಗಳ ಆಗಮನ ಸಂಖ್ಯೆಯಲ್ಲಿ ತೀವ್ರ ಕುಸಿತ: ಜಮ್ಮುವಿನಿಂದ ಅಮರನಾಥ ಯಾತ್ರೆ ಸ್ಥಗಿತ
ಕಾಮನ್ವೆಲ್ತ್ ಗೇಮ್ಸ್: 10 ನೇ ದಿನದ ಆಟದಲ್ಲಿ ಭಾರತಕ್ಕೆ ಪದಕಗಳ ಸುರಿಮಳೆ!