ಕೊಡಗು : ಮಡಿಕೇರಿ ತಾಲೂಕಿನ ಬೊಳಿಬಾಣೆ ಎಂಬಲ್ಲಿ ನಿರಂತರ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ಅಪಾಯಗಳು ಹೆಚ್ಚಾಗುತ್ತಿದೆ. ಭಾರೀ ಮಳೆಗೆ ಜಲಾವೃತಗೊಂಡ ರಸ್ತೆಯಲ್ಲಿ ಜೀಪ್ ಚಲಿಸಲು ಮುಂದಾದಗ ಇಂಜಿನ್ ಆಫ್ ಆಗಿ ನೀರಿನೊಳಗೆ ಜೀಪ್ವೊಂದು ಸಿಲುಕಿಕೊಂಡಿತ್ತು.
ಎದೆಮಟ್ಟದ ನೀರಿನಲ್ಲಿ ಜೀಪ್ ಓಡಿಸಲು ಯತ್ನಿಸಿದ್ದಾರೆ. ಜೀಪ್ ಮುಂದೆ ಸಾಗದ ಕಾರಣ ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳೀಯರಿಂದ ಜೀಪ್ ಮತ್ತು ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ.