ತಮಿಳುನಾಡು: ತಮಿಳುನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಐದು ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಥೇಣಿ, ದಿಂಡಿಗಲ್, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಥೇಣಿಯ ವೈಗೈ ಅಣೆಕಟ್ಟಿನಿಂದ 4,230 ಘನ ಅಡಿ ಹೆಚ್ಚುವರಿ ನೀರನ್ನು ಹೊರಹಾಕಿದ್ದಾರೆ ಮತ್ತು ತೇಣಿ, ದಿಂಡಿಗಲ್, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ರೆಡ್ ಹಿಲ್ಸ್ ಕೆರೆಯಿಂದ ನೀರು ಬಿಟ್ಟ ನಂತರ ತಿರುವಳ್ಳೂರು ಜಿಲ್ಲಾಡಳಿತವು 11 ಹಳ್ಳಿಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದ್ದರಿಂದ 500 ಕ್ಯೂಸೆಕ್ ನೀರು ಬಿಡಲಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ರೆಡ್ ಹಿಲ್ ಕೆರೆಯಿಂದ 500 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಆಲ್ಬಿ ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ಮುಂದೆ ಕೇವಲ QR ಕೋಡ್ ಮೂಲಕವೂ ATMನಿಂದ ಹಣ ಹಿಂಪಡೆಯಬಹುದು!… ಅದೇಗೆ ಅಂತಾ ಇಲ್ಲಿ ನೋಡಿ
ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದ್ರೆ, ಮಾಲೀಕರಿಗೆ 10,000 ರೂ. ದಂಡ ವಿಧಿಸಲು ನಿರ್ಧಾರ… ಎಲ್ಲಿ ಗೊತ್ತಾ?
ಇನ್ಮುಂದೆ ಕೇವಲ QR ಕೋಡ್ ಮೂಲಕವೂ ATMನಿಂದ ಹಣ ಹಿಂಪಡೆಯಬಹುದು!… ಅದೇಗೆ ಅಂತಾ ಇಲ್ಲಿ ನೋಡಿ
BIGG NEWS : ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ : ಪೊಲೀಸರ ವಿಚಾರಣೆಯಲ್ಲಿ ಬಸವರಾಜನ್ ಸ್ಪೋಟಕ ಮಾಹಿತಿ!