ವರದಿ : ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ‘Kannada News Now.Com’ ಸುದ್ದಿಗೆ ಎಚ್ಚೆತ್ತ ಅಧಿಕಾರಿಗಳು ಸ್ಥಳೀಯ ಕಾರ್ಯಕ್ರಮವೊಂದರ ಕುರಿತಾಗಿ ಹಾಕಲಾಗಿದ್ದ ಫ್ಲೆಕ್ಸ್ ನ್ನು ಧಿಡೀರನೆ ತೆರವು ಮಾಡಿದ್ದಾರೆ.
‘ನ್ಯೂಸ್ ನೌ’ ಬೆಳಿಗ್ಗೆಯೆ , ಸ್ಥಳೀಯ ನ್ಯಾಯಾಲಯದ ಪತ್ರಕ್ಕೂ ಡೋಂಟ್ ಕೇರ್! ನಿದ್ದೆಗೆ ಜಾರಿದ ಆಡಳಿತ ವ್ಯವಸ್ಥೆ.! ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರ ಮಾಡಲಾಗಿತ್ತು..ಸುದ್ದಿ ಪಸರಿಸುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತು ಪ್ಲೆಕ್ಸ್ ತೆರವು ಮಾಡಿಸಿದ್ದಾರೆ.
ಚಾಮರಾಜನಗರ ಪಟ್ಟಣದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಕೊಡದೆ ರಾಜ್ಯದ ರಾಜಕಾರಣಿಗಳು ತನ್ಮ ಅಬಿಮಾನಿ ಸಂಘದ ಮೂಲಕ ಪ್ಲೆಕ್ಸ್ ಬ್ಯಾನರ್ ಅಳವಡಿಸೊ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿರುವ ಪ್ರಕರಣ ಕಂಡುಬಂದರೂ ಇಲಾಖೆಗಳು ಪದೆ ಪದೆ ಲೋಪ ಎಸಗುತ್ತಿರುವುದು ವಿಪರ್ಯಾಸವಾಗಿದೆ. ಪ್ಲೆಕ್ಸ್ ಅಳವಡಿಕೆ ಸಂಬಂದ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿ ಗೋಲಿಬಾರ್ ,ಕೆಲವೊಮ್ಮೆ ಜಿಲ್ಲೆಯಲ್ಲಿ ಮಹಾನ್ ನಾಯಕರಿಗೆ ಚಪ್ಪಲಿ ಹಾರ ಹಾಕುವ ಮೂಲಕ ಸಂಘರ್ಷಣೆಗಳು, ಒಬ್ಬರಿಗೊಂದು ಕಾನೂನು ರೂಪಿಸಿದ ನಗರಸಬೆ ಮೇಲೆ ಪ್ರತಿಭಟನೆ ಮಾಡಿ ದಲಿತ ಸಂಘಟನೆಗಳ ಕೆಂಗಣ್ಣಿಗೆ ನಗರಸಬೆ ಗುರಿಯಾಗಿದ್ದವು.
ಫ್ಲೆಕ್ಸ್ ಇಂದ ನಗರ ಸೌಂದರ್ಯ ಹಾಳಾಗುವುದರ ಜೊತೆಗೆ ಸಂಚಾರಕ್ಕೂ ತೊಂದರೆಯುಂಟಾಗುವ ಹಿನ್ನಲೆಯಲ್ಲಿ ಸ್ಥಳೀಯ ಕಾನೂನು ಸೇವೆಗಳ ಪ್ರಾದಿಕಾರ ಆದೇಶಿಸಿದ್ದರೂ ಮೌನ ವಹಿಸಿ ಇಲಾಖೆಗಳು ಕರ್ತವ್ಯ ಲೋಪ ಎಸಗಿರೊದು ವಿಪರ್ಯಾಸ. ಪ್ಲೆಕ್ಸ್ ಹಾಕುವಾಗ ಸುಮ್ಮನಿರೊ ನಗರಸಬೆ ಹಾಕಿ ಪ್ರಚಾರ ಆದ ಮೇಲೆ ತೆರವು ಮಾಡುವ ಪ್ರಕ್ರಿಯೆಯನ್ನ ಸಾರ್ವಜನಿಕರು ಖಂಡಿಸಿದ್ದು ಹಾಕುವ ಮೊದಲೆ ಯಾಕೆ ಜಾಗೃತ ವಹಿಸಬಾರದಿತ್ತು. ಹಾಕೋದು ತೆರವು ಮಾಡೊದು ಸಾಮಾನ್ಯ ಆದರೆ ಇಂತಹವರ ಮೇಲೆ ಕಠಿಣ ಕ್ರಮ ದಂಡವೇಕೆ ಇಲ್ಲ? ಜಿಲ್ಲಾದಿಕಾರಿಗಳು ಇನ್ನು ಮುಂದಾದರೂ ತಪ್ಪಿತಸ್ಥರ ಮೇಲೆ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.
ಬೀದರ್ ಆಟೋ ಅಪಘಾತ ದುರಂತ : ರಾಜ್ಯ ಸರ್ಕಾರದಿಂದ ಪರಿಹಾರ ನೀಡುವಂತೆ ಹೆಚ್ಡಿಕೆ ಆಗ್ರಹ