ಧಾರವಾಡ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಅಂಗನವಾಡಿ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ 8 ಕ್ಕೆ ಧ್ವಜಾರೋಹಣ ಮಾಡಿ, ಸೂರ್ಯಸ್ತದ ವೇಳೆಗೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಜಿಲ್ಲೆಯಾದ್ಯಂತ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾತ್ರ ಆಗಸ್ಟ್ 13 ರಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಹಗಲು-ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆಗಸ್ಟ್ 15 ರ ಸಂಜೆ ಸೂರ್ಯಾಸ್ತ ವೇಳೆಗೆ ಇಳಿಸಬೇಕು ಎಂದು ತಿಳಿಸಿದ್ದಾರೆ.

ಈ ಮೊದಲು ನೀಡಿದ ಸೂಚನೆಯಲ್ಲಿ, ಆಗಸ್ಟ್ 13 ರಿಂದ 15 ರವರೆಗೆ ನಿರಂತರವಾಗಿ ಧ್ವಜ ಹಾರಿಸಲು ತಿಳಿಸಲಾಗಿತ್ತು. ಆದ್ರೆ, ನಿನ್ನೆ( ಆಗಸ್ಟ್ 8 ರಂದು) ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶದನ್ವಯ ಈ ಆದೇಶದವನ್ನು ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Big news:‌ ಚೀನಾದಲ್ಲಿ ʻಝೂನೋಟಿಕ್ ಲ್ಯಾಂಗ್ಯಾ ವೈರಸ್ʼ ಪತ್ತೆ: 35 ಮಂದಿಗೆ ಸೋಂಕು | ʻZoonotic Langya virusʼ found in China

Breaking news: ತೆಲಂಗಾಣ ಬಿಜೆಪಿ ಮುಖಂಡ ʻಜ್ಞಾನೇಂದ್ರ ಪ್ರಸಾದ್ʼ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆ| Gnanendra Prasad found hanging

BIGG NEWS : ವಸತಿ ರಹಿತರಿಗೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ಮನೆ ನಿರ್ಮಿಸಲು ಅರ್ಜಿ ಆಹ್ವಾನ

Share.
Exit mobile version