ದಾವಣಗೆರೆ: ಚುನಾವಣಾ ಮಾರ್ಗಸೂಚಿಯಂತೆ ಒಬ್ಬರ ಮತವನ್ನು ಮತ್ತೊಬ್ಬರು ಹಾಕುವಂತಿಲ್ಲ. ಒಂದು ವೇಳೆ ಹಾಕಿದ್ರೆ ಅದು ಚುನಾವಣಾ ಮಾರ್ಗಸೂಚಿ ಉಲ್ಲಂಘನೆಯೇ ಆಗಲಿದೆ. ಹೀಗಿದ್ದರೂ ಬಿಜೆಪಿ ಅಭ್ಯರ್ಥಿಯ ಪರವಾಗಿ ಪತಿರಾಯನೊಬ್ಬ ಮತ ಚಲಾಯಿಸಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ.

ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ. ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರೋದಾಗಿ ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತಗಟ್ಟೆಗೆ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಜೊತೆಗೆ ಸಂಸದ ಜಿ.ಎಂ ಸಿದ್ದೇಶ್ವರ್ ಆಗಮಿಸಿದ್ದರು. ಮತಗಟ್ಟೆಯ ಬಳಿಗೆ ಬಂದಾಗ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ ಚಲಾಯಿಸೋದಕ್ಕೂ ಗೊಂದಲಕ್ಕೆ ಒಳಗಾದರು ಎನ್ನಲಾಗಿದೆ.

ಮತ ಹಾಕುವಾಗ ಗೊಂದಲಕ್ಕೆ ಒಳಗಾದಂತ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬದಲಾಗಿ, ಸಂಸದ ಜಿಎಂ ಸಿದ್ದೇಶ್ವರ್ ಅವರೇ ಪತ್ನಿಗೆ ಸಹಾಯ ಮಾಡಲು ತಾನೇ ಮತದಾ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಮತವನ್ನು ಹಾಕೋದಕ್ಕೆ ಗಾಬರಿಯಾಗಿ ಪತಿಯಿಂದ ಮತ ಚಲಾಯಿಸಿದ್ದಕ್ಕೆ ನೆಟ್ಟಿಗರು, ಸಂಸದರು, ಬಿಜೆಪಿ ಅಭ್ಯರ್ಥಿಯ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಪ್ರಜ್ವಲ್ ‘ಪೆನ್ ಡ್ರೈವ್’ ಕೇಸಲ್ಲಿ ಹಾಸನ ಮಾಜಿ ಶಾಸಕನ ಕೈವಾಡವಿದೆ : ಶಾಸಕ ರವಿಗಣಿಗ ಗಂಭೀರ ಆರೋಪ

ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್

Share.
Exit mobile version