ತೈಪೆ (ತೈವಾನ್): ಚೀನಾದಲ್ಲಿ ಝೂನೋಟಿಕ್ ಲ್ಯಾಂಗ್ಯಾ ವೈರಸ್(Zoonotic Langya virus) ಪತ್ತೆಯಾಗಿದ್ದು, ಇದುವರೆಗೆ 35 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ತೈವಾನ್‌ನ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ತೈಪೆಯು ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷಾ ವಿಧಾನವನ್ನು ಸ್ಥಾಪಿಸಲಿದ್ದು, ಅದು ವೈರಸ್ ಮತ್ತು ಅದರ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಲಾಂಗ್ಯಾ ವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಕಂಡುಬಂದಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ತೈಪೆ ಟೈಮ್ಸ್ ವರದಿ ಮಾಡಿದೆ.

ತೈವಾನ್‌ನ ಸಿಡಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಚುವಾಂಗ್ ಜೆನ್-ಹ್ಸಿಯಾಂಗ್ ಭಾನುವಾರ ಮಾತನಾಡಿ, ಅಧ್ಯಯನದ ಪ್ರಕಾರ, ಮನುಷ್ಯನಿಂದ ಮನುಷ್ಯನಿಗೆ ಈ ವೈರಸ್ ಹರಡುವ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.

Rain in Karnataka : ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಆರೆಂಜ್-ಯೆಲ್ಲೋ ಅಲರ್ಟ್’ ಘೋಷಣೆ

BIGG NEWS : ರಾಜ್ಯದ 160 ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ `ಕಾಳಜಿ ಕಿಟ್’ : ಕಂದಾಯ ಸಚಿವ ಆರ್. ಅಶೋಕ್

Breaking news: ತೆಲಂಗಾಣ ಬಿಜೆಪಿ ಮುಖಂಡ ʻಜ್ಞಾನೇಂದ್ರ ಪ್ರಸಾದ್ʼ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆ| Gnanendra Prasad found hanging

Share.
Exit mobile version