ಬೆಂಗಳೂರು : ರಾಜ್ಯ ಸರ್ಕಾರವು ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 14 ಜಿಲ್ಲೆಗಳ 160 ಗ್ರಾಮಗಳ ಜನರಿಗೆ ಕಾಳಜಿ ಕಿಟ್ ನೀಡಲು ನಿರ್ಧರಿಸಿದೆ ಎಂದ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

Good News : ಹಾಲು ಉತ್ಪಾದಕರಿಗೆ ಭರ್ಜರಿ ಗುಡ್ ನ್ಯೂಸ್ : ಹಾಲಿನ ದರ ರೂ.1 ಹೆಚ್ಚಳ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ರಾಜ್ಯದ 14 ಜಿಲ್ಲೆಗಳ 160 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ಕಾಳಜಿ ಕಿಟ್ ಗಳನ್ನು ನೀಡಲಾಗುತ್ತಿದೆ. 10-15 ದಿನಗಳಿಗೆ ಆಗುವಷ್ಟು ದಿನಸಿಗಳನ್ನು ನೀಡಲಾಗುತ್ತಿದೆ. ಸಂತ್ರಸ್ತರಿಗೆ ಅಕ್ಕಿ, ತೋಗರಿ ಬೇಳೆ, ಆಡುಗೆ ಎಣ್ಣೆ, ಉಪ್ಪು ಸೇರಿದಂತೆ 11 ಪದಾರ್ಥಗಳ ಕಿಟ್ ಅನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

BIGG BREAKING NEWS : ಭಾರತ ತಂಡದ ಖೋ ಖೋ ಆಟಗಾರ `ಕರ್ನಾಟಕ ರತ್ನ ತೀರ್ಥಹಳ್ಳಿಯ ವಿನಯ್’ ಇನ್ನಿಲ್ಲ| Kho Kho Player Vinay No Mor

ಇನ್ನು ಕಾಳಜಿ ಕೇಂದ್ರಗಳಲ್ಲಿ ಗಂಜಿ, ಅನ್ನ, ಸಾಂಬರ್, ಚಪಾತಿ, ಪಲ್ಯ, ಉಪ್ಪಿನ ಕಾಯಿ, ಮೊಸರು ಕೊಡಲಾಗುತ್ತದೆ. ಎಲ್ಲೆಲ್ಲಿ ಮೊಟ್ಟೆ ತೆಗೆದುಕೊಳ್ಳುತ್ತಾರೋ ಅಲ್ಲಿ ಮೊಟ್ಟೆ ಕೊಡಲು ಆದೇಶಿಸಲಾಗಿದೆ. ಪ್ರತಿದಿನ ಬೇರೆ ಉಪಾಹಾರ ನೀಡಲು ಸೂಚನೆ ನೀಡಲಾಗಿದೆ. ಕಾಳಜಿ ಕೇಂದ್ರದಲ್ಲಿ ಬ್ರಷ್, ಟೂತ್ ಪೇಸ್ಟ್, ಸೂಪು, ಟವಲ್ ನೀಡುವಂತೆ ತಿಳಿಸಲಾಗಿದೆ ಎಂದರು.

ರಾಜ್ಯದಲ್ಲಿ 14 ಜಿಲ್ಲೆಯಲ್ಲಿ ಪ್ರವಾಹ ಪಿಡಿತ ಪ್ರದೇಶವಾಗಿದೆ.  ಈಗಾಗಲೇ 161 ಗ್ರಾಮ 21,727 ಜನರು ಪ್ರವಾಹದಿಂದ  ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅತಿವೃಷ್ಠಿಯಿಂದ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ. ಸಿಡಿಲುಬಡಿದು 15 ಜನರು, ಮರಬಿದ್ದು 5 ಜನರು ಸಾವನ್ನಪ್ಪಿದ್ದಾರೆ. ಮನೆ ಕುಸಿದು 19 , ಪ್ರವಾಹಕ್ಕೆ ಸಿಲುಕಿ 24ಜನರು ಸಾವು.  ಭೂಕುಸಿತದಿಂದ 9, ವಿದ್ಯುತ್‌ ತಗುಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಿಂದ 8197 ಸ್ಥಳಾಂತರ ಮಾಡಲಾಗಿದೆ.ಕಾಳಜಿ ಕೇಂದ್ರದಲ್ಲಿ ಈವರೆಗೆ  7386ಜನರು ಆಶ್ರಯ ಪಡೆದಿದ್ದಾರೆ.  ಮಳೆಯಿಂದಾಗಿ 666 ಮನೆಗಳು ಸಂಪೂರ್ಣ ಹಾನಿ ಆಗಿದೆ.  2949 ಮನೆಗಳಿಗೆ ತೀವ್ರ ಹಾನಿಯಾಗಿದೆ. 17,750 ಮನೆಗಳು ಭಾಗಶಃ ಹಾನಿಯಾಗಿದೆ.

ಮಳೆಯಿಂದಾಗಿ ಒಟ್ಟು 11,768 ಕಿ.ಲೋ ಮೀಟರ್‌ ರಸ್ತೆ ಹಾನಿಯಾಗಿದೆ. ಮಳೆಯಿಂದ 1157 ಸೇತುವೆ, 4561 ಶಾಲೆಗಳಿಗೆ ಹಾನಿಯಾಗಿದೆ. 122 ಪ್ರಾಥಮಿಕ ಆರೋಗ್ಯ ಕೇಂದ್ರ 2249 ಅಂಗನವಾಡಿ, 17066 ವಿದ್ಯುತ್‌ ಕಂಬಗಳು,, 1472 ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ.

ಮಳೆಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುವುದು.  ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ ಎಫ್‌ನಿಂದ 4 ಲಕ್ಷ , ಸರ್ಕಾರದಿಂದ 1 ಲಕ್ಷ ನೀಡಲಾಗುವುದು. ಎಲ್ಲಾ ಡಿಜಿಗಳ ಖಾತೆಯಲ್ಲಿ 10 ಕೋಟಿ ರೂ ಹಣವಿದೆ. ಕಾಳಜಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ವಿತರಣೆಗೆ ಸೂಚನೆ.  ಲಂಬಾಣಿ ತಾಂಡಾ  ಗ್ರಾಮ ಎಂದು ಘೋಷಿಸಲು ನಿರ್ಧಾರ ಮಾಡಲಾಗಿದೆ.

 ರಾಜ್ಯದಲ್ಲಿ ಮಳೆ ಅವಾಂತರದಿಂದ ಸಾವುನೋವು ಹಿನ್ನೆಲೆ ಆ.4ರಂದು ಮನೆ ಹಾನಿ ಪರಿಹಾರಕ್ಕೆ 300 ಕೋಟಿ ಬಿಡುಗಡೆ ಮಾಡಲಾಗಿದೆ. ಆ.6 ರಂದು 21 ಜಿಲ್ಲೆಗಳಿಗೆ 200ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. 26 ಜಿಲ್ಲೆಗಳಿಗೆ ಒಟ್ಟು 55 ಕೋಟಿ ಬಿಡುಗಡೆಮಾಡಲಾಗಿದೆ. ತುರ್ತು ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

Share.
Exit mobile version