ಇಂಡೋನೇಷ್ಯಾ: ಇಂಡೋನೇಷ್ಯಾದ ಪಪುವಾ ನ್ಯೂಗಿನಿಯಾದಲ್ಲಿ (ಪಿಎನ್ಜಿ) ಭಾನುವಾರ ಮುಂಜಾನೆ ಸಂಭವಿಸಿದ ಭಾರೀ ಭೂಕಂಪಕ್ಕೆ ಐವರು ಬಲಿಯಾಗಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ಮಾಧ್ಯಮ ವರದಿಗಳು ವರದಿ ಮಾಡಿವೆ.
ಪಪುವಾ ನ್ಯೂಗಿನಿಯಾದಲ್ಲಿ ಭಾನುವಾರ ಮುಂಜಾನೆ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ನಂತರ ಅಮೆರಿಕದ ಜಿಯೊಲಾಜಿಕಲ್ ಸರ್ವೇ ಸಂಸ್ಥೆಯು ಸುನಾಮಿ ಎಚ್ಚರಿಕೆಯನ್ನೂ ಸಹ ನೀಡಿತ್ತು.
ಆದಾಗ್ಯೂ, ಭಾನುವಾರ ಸಂಭವಿಸಿದ ಭೂಕಂಪದಿಂದ ಹಾನಿಯ ಪ್ರಮಾಣ ಮತ್ತು ಸಾವು-ನೋವುಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.
BIG NEWS: ಸುಪ್ರೀಂ ಕೋರ್ಟ್ ನಲ್ಲಿ ಇಂದು CAA ವಿರುದ್ಧದ 200 ಕ್ಕೂPIL ಅರ್ಜಿ ವಿಚಾರಣೆ