ಬೆಂಗಳೂರು: ಉತ್ತರಾಖಂಡಕ್ಕೆ ಚಾರಣಕ್ಕೆ ಕರ್ನಾಟಕದಿಂದ ತೆರಳಿದ್ದಂತ ಐವರು ಚಾರಣಿಗರು ಸೇಫ್ ಆಗಿದ್ದಾರೆ. ಇನ್ನುಳಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಡೆಹ್ರಾಡೂನ್ ಗೆ ವಿಮಾನದಲ್ಲಿ ಸಾಗಿಸಲು ಸ್ವಲ್ಪ ವಿಳಂಬವಾಗಿದೆ. ಬೆಂಗಳೂರಿಗೆ ಅಲ್ಲಿಂತ ತರಲಾಗುತ್ತದೆ ಅಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟ ಪಡಿಸಿದ್ದಾರೆ.
ಇಂದು ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಅವಘಡದಲ್ಲಿ ಬದುಕುಳಿದಿರುವ 5 ಜನ ಚಾರಣಿಗರು ಮತ್ತು 9 ಮೃತದೇಹಗಳನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಸಾಗಿಸಲು ಸ್ವಲ್ಪ ವಿಳಂಬವಾಗಿದೆ. ದುರಂತದ ಸ್ವರೂಪದ ಕಾರಣಕ್ಕೆ ಕೆಲವು ಏಜೆನ್ಸಿಗಳಿಂದ ಕಾನೂನು ದಾಖಲೆಗಳ ಪರಿಶೀಲನಾ ಕೆಲಸ ವಿಳಂಬವಾಗುತ್ತಿದೆ ಎಂದಿದ್ದಾರೆ.
ಬದುಕುಳಿದಿರುವ 5 ಜನ ಚಾರಣಿಗರು ಮತ್ತು 9 ಮೃತದೇಹಗಳು ಇಂದು ಮಧ್ಯಾಹ್ನ 2.30ಕ್ಕೆ ವಿಮಾನದ ಮೂಲಕ ಡೆಹ್ರಾಡೂನ್ ತಲುಪಲಿವೆ. ಇದಲ್ಲದೆ, ಎಲ್ಲಾ 9 ಮೃತದೇಹಗಳನ್ನು ಬೆಂಗಳೂರಿಗೆ ಸಾಗಿಸಲು ಈ ಅಲ್ಪ ಅವಧಿಯಲ್ಲಿ ಚಾರ್ಟರ್ ಫ್ಲೈಟ್ ವ್ಯವಸ್ಥೆಗೊಳಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂದು ಎಲ್ಲಾ 9 ಮೃತದೇಹಗಳನ್ನು ರಸ್ತೆ ಮೂಲಕ ದೆಹಲಿಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ವಿಮಾನಗಳ ಮೂಲಕ ನಾಳೆ ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ಮೃತ ದೇಹಗಳನ್ನು ತಲುಪಿಸಲು ನಮ್ಮ ತಂಡ ವ್ಯವಸ್ಥೆ ಮಾಡುತ್ತಿದೆ. ಇನ್ನೂ ಒಂದೆರಡು ಗಂಟೆಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದಿದ್ದಾರೆ.
BIG NEWS: ಇಂದು ‘ಸಚಿವ ಸ್ಥಾನ’ಕ್ಕೆ ‘ಬಿ.ನಾಗೇಂದ್ರ’ ರಾಜೀನಾಮೆ: ಡಿಸಿಎಂ ಡಿ.ಕೆ ಶಿವಕುಮಾರ್
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ : ಕೇವಲ 60 ಸೆಕೆಂಡ್ ನಲ್ಲಿ ʻಚಾರ್ಜ್ʼ ಆಗಲಿದೆ ಫೋನ್!