ಉತ್ತರಪ್ರದೇಶ: ಇಲ್ಲಿನ ಮವು ಜಿಲ್ಲೆಯೊಂದರಲ್ಲಿ ಭೀಕರ ಅಗ್ನಿದುರಂತವೊಂದು ಸಂಭವಸಿದೆ. ಮನೆಗೆ ಬೆಂಕಿ ಬಿದ್ದು, ಒಂದೇ ಕುಟುಂಬದ ಐವರು ಅಗ್ನಿಗೆ ಆಹುತಿಯಾಗಿರೋ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮವು ಜಿಲ್ಲೆಯ ಶಹಾಪುರ್ ಗ್ರಾಮದಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದಿದೆ. ಈ ಬೆಂಕಿಯಲ್ಲಿ ಮಹಿಳೆ, ಮೂವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವವಾಗಿ ದಹಿಸಿ ಹೋಗಿದ್ದಾರೆ.
ಉತ್ತರ ಪ್ರದೇಶದ ಕೊಪಗಂಜ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
BIGG NEWS: ಇಂದಿನಿಂದ ವಾಯುವ್ಯ ಭಾರತದಲ್ಲಿ ಶೀತಗಾಳಿ ಕಡಿಮೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ