ಶ್ರೀನಗರ: ರೈಸಿಂಗ್ ಕಾಶ್ಮೀರ್ ದೈನಿಕಕ್ಕೆ ಸಂಬಂಧಿಸಿದ ಐವರು ಕಾಶ್ಮೀರಿ ಪತ್ರಕರ್ತರು ರಾಜೀನಾಮೆ ನೀಡಿದ್ದಾರೆ. ಶಂಕಿತ ಉಗ್ರಗಾಮಿ ಸಂಘಟನೆಯಿಂದ ಬಂದ ಬೆದರಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಮದು ತಿಳಿದುಬಂದಿದೆ.
ಉಗ್ರಗಾಮಿ ಗಳು ಇತ್ತೀಚೆಗೆ ಹನ್ನೆರಡು ಮಾಧ್ಯಮ ಪ್ರತಿನಿಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಇವರು ಭದ್ರತಾ ಪಡೆಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಥಳೀಯ ಪತ್ರಿಗೆಗಳ ಸಂಪದಕರ ಹೆಸರೂ ಸಹ ಇದೆ.
“ಕಾಶ್ಮೀರ ಫೈಟ್” ಎಂಬ ಬ್ಲಾಗ್ನಲ್ಲಿ ಪ್ರಕಟವಾದ ಬೆದರಿಕೆಗಳ ಹಿಂದೆ ಲಷ್ಕರ್-ಎ-ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಇದೆ ಎಂದು ಶಂಕಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಇವರ ವಿರುದ್ಧ ಯುಎಪಿಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವರದಿಯ ಪ್ರಕಾರ, ಮೂವರು ವರದಿಗಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕವೇ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದಾರೆ.
“ನಾಗರಿಕ ಸಮಸ್ಯೆಗಳು, ನೀರು, ಚರಂಡಿಗಳು ಮತ್ತು ಸಾರಿಗೆ ಬಗ್ಗೆ ನಾನು ವರದಿ ಮಾಡುತ್ತಿದ್ದೇನೆ. ನಾನು ಇಲ್ಲಿಯವರೆಗೆ ಸೇನೆಯ ಬಗ್ಗೆ ಏನನ್ನೂ ವರದಿ ಮಾಡಿಲ್ಲ ಅಥವಾ ಯಾವುದೇ ಸೇನಾ ಕಾರ್ಯವನ್ನು ವರದಿ ಮಾಡಿಲ್ಲ. ಆದರೂ ಅವರು ನನ್ನನ್ನು ಸೇನೆಯ ಮಾಹಿತಿದಾರ ಎಂದು ಬ್ರಾಂಡ್ ಮಾಡಿದ್ದಾರೆ, ”ಎಂದು ವರದಿಗಾರರೊಬ್ಬರು ಹೇಳಿಕೊಂಡಿದ್ದಾರೆ.
BIGG NEWS: 108 ಆಂಬುಲೆನ್ಸ್ ಸಿಬ್ಬಂದಿಯ ಮನವೊಲಿಸಲು ಯತ್ನಿಸುತ್ತೇವೆ: ಡಾ. ಸುಧಾಕರ್
G-20 Summit: ವಿಶ್ವ ನಾಯಕರೊಂದಿಗೆ ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿ, ಸಸಿ ನೆಟ್ಟ ಪ್ರಧಾನಿ ಮೋದಿ
ಅಯ್ಯೋ ನಾನು ಕಿವುಡನಾಗ್ಬಿಟ್ಟೆ ಅಂದುಕೊಂಡವನ ಕಿವಿಯಲ್ಲಿತ್ತು ಆ ವಸ್ತು? 5 ವರ್ಷಗಳ ನಂತ್ರ ಪತ್ತೆ
BIGG NEWS: 108 ಆಂಬುಲೆನ್ಸ್ ಸಿಬ್ಬಂದಿಯ ಮನವೊಲಿಸಲು ಯತ್ನಿಸುತ್ತೇವೆ: ಡಾ. ಸುಧಾಕರ್