ಉತ್ತರಕನ್ನಡ : ಅವರೆಲ್ಲರೂ ಕಾರ್ಮಿಕರು ಆಗ ತಾನೆ ಕೆಲಸ ಮುಗಿಸಿ ಊಟ ಮಾಡಿ ರಸ್ತೆ ಬದಿಯಲ್ಲಿ ಗಿಡದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ವೇಗವಾಗಿ ಬಂದಂತಹ ಕಾರು ಅವರ ಮೇಲೆ ಹರಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಸ್ತೆಯ ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮಗು ಸೇರಿ ಐವರಿಗೆ ಗಂಭೀರವಾದಂತಹ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಹೌದು ಊಟ ಮಾಡಿ ವಿಶ್ರಾಂತಿ ಪಡೆಯುವುದು ಕಾರ್ಮಿಕರ ಮೇಲೆ ಕಾರು ಹರಿದಿದೆ. ಅಪಘಾರದಲ್ಲಿ ಮಗು ಸೇರಿ ಐವರಿಗೆ ಗಂಭೀರವಾದಂತ ಗಾಯಗಳಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟ ರಸ್ತೆಯ ಹಿಪ್ಪನಹಳ್ಳಿ ಕ್ರಾಸ್ ಎಂಬಲ್ಲಿ ಈ ಅಪಘಾತ ನಡೆದಿದೆ.
ಗಾಯಾಳು ಐವರಿಗೆ ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಹೈದ್ರಾಬಾದ್ ಮೂಲದ ಮೆಹಬೂಬ್ ನಗರದ ನಿವಾಸಿಗಳೆಂದು ಹೆಳಲಾಗುತ್ತಿದೆ. ಘಟನೆ ಕುರಿದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.