ಮೈನ್ಪುರಿ, (ಉತ್ತರಪ್ರದೇಶ) ಭತ್ತದ ಬೆಳೆಗೆ ಸಿಂಪರಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ ಪರಿಣಾಮ ಅದನ್ನು ಕುಡಿದು ಇಬ್ಬರು ಮಕ್ಕಳು ಸೇರಿದಂತೆ ಐದು ಜನರು ಗುರುವಾರ ಗ್ರಾಮದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಾನಂದನ್ (35), ಅವರ ಮಕ್ಕಳಾದ ಶಿವಾಂಗ್ (6) ಮತ್ತು ದಿವ್ಯಾಂಶ್ (5), ಅವರ ಮಾವ ರವೀಂದ್ರ ಸಿಂಗ್ (55) ಮತ್ತು ನೆರೆಮನೆಯ ಸೋಬ್ರಾನ್ (42) ಅವರು ನಾಗ್ಲಾ ಕನ್ಹೈ ಗ್ರಾಮದ ತಮ್ಮ ಮನೆಯಲ್ಲಿ ತಯಾರಿಸಿದ ಚಹಾ ಕುಡಿದ ನಂತರ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ.