ಬೆಂಗಳೂರು: ನಗರದಲ್ಲಿ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ರಣಚಂಡಿಗೆ ಮೊದಲ ಬಲಿಯಾಗಿದೆ. ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿದ್ದಾರೆ.
BIGG NEWS: ಮೈಸೂರಿನಲ್ಲಿ ಭಾರಿ ಮಳೆಗೆ ನಿಲ್ಲದ ಅವಾಂತರ; 50ಕ್ಕೂ ಹೆಚ್ಚು ಶೇಡ್ಗಳಿಗೆ ನುಗ್ಗಿದ ನೀರು
ಇನ್ನು ವರುಣ ಅಬ್ಬರಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ನಲುಗಿ ಹೋಗಿದೆ. ಹೆಚ್ಬಿಆರ್ ಲೇಔಟ್, ಇಂದಿರಾನಗರ, ಸರ್ಜಾಪುರ ಸೇರಿದಂತೆ ಹಲವು ಕಡೆ ಜಲಾವೃತವಾಗಿದೆ. ನಿರಂತರ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತೆ ಆಗಿದೆ. ಯಾವ ರಸ್ತೆಯಲ್ಲಿ ಸಂಚಾರ ಮಾಡಿದರೂ ರಸ್ತೆಯ ಬದಲು ನೀರನ್ನೆ ಕಾಣುವ ಪರಿಸ್ಥಿತಿ ಉಂಟಾಗಿದೆ. ಇನ್ನೂ ಅಂಡರ್ ಪಾಸ್ ಪರಿಸ್ಥಿತಿ ಹೇಳೋದೇ ಬೇಕಾಗಿಲ್ಲ. ಅದಕ್ಕೆ ಒಂದು ಉದಾಹರಣೆ ಬಾಣಸವಾಡಿ ಔಟರ್ ರಿಂಗ್ ರೋಡ್ನ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿದೆ.