ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಪ್ರಥಮ ಎನ್ನುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಪೊಲೀಸರು ಕುವೆಂಪು ವಿರಚಿತ ಸ್ಮಶಾನ ಕುರುಕ್ಷೇತ್ರಂನ ಕೌರವ ನಾಟಕವನ್ನು ಹಾಡುವ ಮೂಲಕ ಹೊಸ ನಾಂದಿ ಹಾಡಿದ್ದಾರೆ. ಈ ಮೂಲಕ ಕಾನೂನು ಪಾಲನೆಗೂ ಸೈ, ನಾಟಕವಾಡಿ ಜನರ ಪ್ರೀತಿ ಗಳಿಸೋದಕ್ಕೂ ಜೈ ಎಂದಿದ್ದಾರೆ.
ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಮೂರು ಠಾಣೆಯ ಪೊಲೀಸರು ಇಂತಹ ವಿನೂತನ ಪ್ರಯೋಗವನ್ನು ಮಾಡಿದ್ದಾರೆ. ಪೊಲೀಸರೇ ನಟಿಸಿ, ನಾಟಕವನ್ನು ಪ್ರದರ್ಶನ ಮಾಡಿದ್ದಾರೆ. ಪೊಲೀಸರೇ ಪ್ರದರ್ಶಿಸಿದಂತ ನಾಟಕದ ನಟನೆಯನ್ನು ಕಂಡಂತ ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
Best Wishes 🥂 https://t.co/9nwoMFXtsx
— Kichcha Sudeepa (@KicchaSudeep) January 3, 2023
ಅಂದಹಾಗೇ ಹೀಗೆ ನಾಟಕವಾಡಿ, ಜನಸ್ನೇಹಿ ಪೊಲೀಸ್ ನಡೆಯನ್ನು ತೋರಿದ್ದು ಗೌರಿಬಿದನೂರು ನಗರ, ಗ್ರಾಮಾಂತರ ಹಾಗೂ ಮಂಚನಬೆಲೆ ಠಾಣೆಯ ಪೊಲೀಸರಾಗಿದ್ದಾರೆ. ಈ ನಾಟಕವನ್ನು ಭಾನುಪ್ರಕಾಶ್ ನಿನಾಸಂ ನಿರ್ದೇಶಿಸಿದ್ದಾರೆ.
ಕೌರವನ ಪಾತ್ರದಲ್ಲಿ ಗೌರಿಬಿದನೂರು ಸಿಪಿಐ ಕೆ.ಪಿ ಸತ್ಯನಾರಾಯಣ ಹರಿಯಬ್ಬೆ ಕಾಣಿಸಿಕೊಂಡಿದ್ದರೇ, ಇತರೆ ಪಾತ್ರಗಳಲ್ಲಿ ಗೌರಿಬಿದನೂರು ವೃತ್ತದ ಮೂರು ಠಾಣೆಯ ಪೊಲೀಸ್ ಸಿಬ್ಬಂದಿಗಳು ಕಾಣಿಸಿಕೊಂಡಿದ್ದಾರೆ.
ಪೊಲೀಸರೇ ನಾಟಕವನ್ನು ಆಡುವಂತ ವಿಷಯ ತಿಳಿದಂತ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ನ್ಯಾಯಾಧೀಶರಾದಂತ ಮಂಜುನಾಥಾಚಾರಿ ಖುದ್ದು ಹಾಜರಾಗಿ ನೋಡಿದ್ದಾರೆ. ಅಲ್ಲದೇ ಪೊಲೀಸರೇ ಆಡಿದಂತ ನಾಟಕವನ್ನು ಕಂಡು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ನಾಟಕವು ಯೂಟ್ಯೂಬ್ ನಲ್ಲಿ ವೈರಲ್ ಕೂಡ ಆಗಿದೆ. ನೀವು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಪೊಲೀಸರೇ ನಟಿಸಿ, ಪ್ರದರ್ಶಿಸಿದಂತ ರಾಜ್ಯದಲ್ಲೇ ಪ್ರಥಮವೆನ್ನುವಂತ ನಾಟಕವನ್ನು ನೋಡಿ.
ವರದಿ: ವಸಂತ ಬಿ ಈಶ್ವರಗೆರೆ