ಬೆಂಗಳೂರು : ನಿನ್ನೆ ಬೆಂಗಳೂರಲ್ಲಿ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಆಫ್ಜಲ್ನನ್ನು ಬೆಂಗಳೂರಿನ ಬಸವನಗುಡಿ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಶೂಟಿಂಗ್ ಪ್ರಾಕ್ಟೀಸ್ ವೇಳೆ ಆಫ್ಜಲ್ನಿಂದ ಶೂಟ್ ಮಾಡಿದ್ದ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.
ಅಫ್ಜಲ್ ನಿನ್ನೆ ತನ್ನ ಫ್ಲಾಟ್ ಕಿಟಕಿ ಬಳಿ ಫೈರಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಉದ್ಯಮಿ ರಾಜಗೋಪಾಲ್ ಗೆ ಗುಂಡು ತಗುಲಿತ್ತು. ಗಾಯಾಳು ವಿಚಾರಣೆ ಮಾಡಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಉದ್ಯಮಿ ರಾಜಗೋಪಾಲ್ ಗೆ ಯಾವುದೇ ಬೆದರಿಕೆ ಕರೆ ಬಂದಿರಲಿಲ್ಲ. ಪರಿಶೀಲನೆ ವೇಳೆ ಅಫ್ಜಲ್ ಫ್ಲ್ಯಾಟ್ನಿಂದ ಫೈರ್ ಆಗಿರುವುದು ಪತ್ತೆಯಾಗಿದೆ. ಸದ್ಯ ಆಫ್ಜಲನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ನಿನ್ನೆ ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ಈ ಒಂದು ಘಟನೆ ನಡೆದಿತ್ತು.








