ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬ ಆಚರಿಸುವ ಭರದಲ್ಲಿ ಒಂದೆಡೆ ಪಟಾಕಿ ಸಿಡಿಸುವುದು ಹೆಚ್ಚಾಗಿದ್ರೆ ಇನ್ನೊಂದೆಡೆ ಪಟಾಕಿಯಿಂದ ಅವಘಡಗಳೂ ಹೆಚ್ಚಾಗುತ್ತಿದೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ನಾಲ್ವರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಂಟೋ ಕಣ್ಣಿನಾಸ್ಪತ್ರೆಯ ಡಾ. ವಿದ್ಯಾ ಮಾತನಾಡಿ, ಈಗಾಗಲೇ ಮೂವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. 15 ವರ್ಷದ ಬಾಲಕನ ಮುಖ ಸುಟ್ಟು ಗಾಯಗಳಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಬಿರ್ನಿಂಗ್ ವಾರ್ಡ್ ಚಿಕಿತ್ಸೆ ನೀಡಲಾಗುತ್ತಿದೆ. ಥಣಿಸಂದ್ರದ 7 ವರ್ಷದ ಬಾಲಕನ ಎಡಗಣ್ಣಿಗೆ ಗಾಯವಾಗಿದೆ. ಫೇಜರ್ಟೌನ್ನ 7 ವರ್ಷದ ಬಾಲಕನ ಬಲಗಣ್ಣಿಗೆ ಗಾಯವಾಗಿದೆ. ಸದ್ಯ ಬಾಲಕರ ಕಣ್ಣಿಗೆಯಾವುದೇ ಹಾನಿಯಾಗಿಲ್ಲ ಎಂದು ಮಿಂಟೋ ಕಣ್ಣಿನಾಸ್ಪತ್ರೆಯ ಡಾಕ್ಟರ್. ವಿದ್ಯಾ ತಿಳಿಸಿದ್ದಾರೆ