ಬೆಂಗಳೂರು : ರಾಜ್ಯದಲ್ಲಿ ಕಟ್ಟಡ ಅಗ್ನಿ ಅವಘಡ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನಿರಾಕ್ಷೇಪಣಾ ಪತ್ರ (ಎನ್ ಒಸಿ) ನಿಯಮ ಪರಿಷ್ಕರಿಸಿದೆ.
ಅಗ್ನಿ ಶಾಮಕ, ತುರ್ತು ಸೇವೆಗಳ ಇಲಾಖೆ ನಿಯಮದಂತೆ 21 ಮೀಟರ್ ಎತ್ತರದ ಕಟ್ಟಡಗಳಿಗೆ ಎನ್ ಸಿ ಕಡ್ಡಾಯ ಮಾಡಲಾಗಿತ್ತು. ಇನ್ನು 15 ಮೀಟರ್ ಎತ್ತರದ ಕಟ್ಟಡಗಳಿಗೂ (ಅಂದಾಜು 4 ಅಂತಸ್ತು) ಎನ್ಒಸಿ ಕಡ್ಡಾಯವಾಗಿದೆ.
ಶೈಕ್ಷಣಿಕ ಕಟ್ಟಡ, ಆಸ್ಪತ್ರೆ, ವಸತಿ, ವಾಣಿಜ್ಯ, ಕೈಗಾರಿಕೆ, ಗೋದಾಮಿನ ಉಪಯೋಗಕ್ಕಾಗಿ ಬಹುಮಹಡಿಯ 15 ಮೀಟರ್ ಎತ್ತರದ ಕಟ್ಟಡಗಳಿಗೆ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯುವ ನಿಯಮ ಅನ್ವಯವಾಗಲಿದೆ.
ಅಂದಾಜು 4 ಅಂತಸ್ತಿನ ಕಟ್ಟಡಗಳಿಗೂ ಎನ್ಒಸಿ ಕಡ್ಡಾಯವಾಗಿದೆ. ಶೈಕ್ಷಣಿಕ ಕಟ್ಟಡ, ವಸತಿ, ಆಸ್ಪತ್ರೆ, ವಾಣಿಜ್ಯ, ಕೈಗಾರಿಕೆ, ಗೋದಾಮಿನ ಉಪಯೋಗಕ್ಕಾಗಿ ಬಹುಮಹಡಿಯ 15 ಮೀಟರ್ ಎತ್ತರದ ಕಟ್ಟಡಗಳಿಗೆ ಕಡ್ಡಾಯವಾಗಿ ಎನ್ಒಸಿ ಪತ್ರ ಪಡೆಯುವ ನಿಯಮ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.