ಮಧ್ಯಪ್ರದೇಶ: ಅಂದು ಎಲ್ಲರು ಮದುವೆ ಮನೆಯ ಸಂಭ್ರಮದಲ್ಲಿ ಇದ್ದರು. ಆ ದಿನ ಮನೆಯಲ್ಲಿ ಬಂಧುಗಳೆಲ್ಲ ಬಂದು ಶಾಸ್ತ್ರ, ಮೋಜು ಮಸ್ತಿ ಮಾಡುವಷ್ಟರಲ್ಲಿ ವಿಧಿಯಾಟ ಬೇರೆನೇ ಆಗಿತ್ತು. ಯಾಕೆಂದರೆ ಮಧ್ಯಪ್ರದೇಶದ ಮೊರಾದಾಬಾದ್ನಲ್ಲಿ ಮದುವೆ ನಡೆಯುತ್ತಿದ್ದ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಿಂದ ೫ ಮಂದಿ ಸಾವನ್ನಪ್ಪಿದ್ದಾರೆ.
ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.ಈ ಘಟನೆಯ ನಂತರ, ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿಯನ್ನ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.