ರಾಯಚೂರು: ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ತೊಂದರೆಯಾಗಿದೆ.
ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ 7ನೇ ಘಟಕದ ಎಚ್. ಟಿ. 6.6 ಕೆ. ವಿ. ಪ್ಯಾನಲ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ 210ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನ ಘಟಕದ ಯು. ಸಿ.ಬಿ. ಸ್ವಿಚ್ ಗೇರ್ ಸುಟ್ಟು ಕರಕಲಾಗಿದ್ದು,
ಒಂದು ವಾರ ಕಾಲ ವಿದ್ಯುತ್ ಉತ್ಪಾದನೆಯನ್ನ ಸ್ಥಗಿತ ಮಾಡಲಾಗಿದೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.