ಬೆಂಗಳೂರು : ನಗರದ ಆರ್.ಟಿ.ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ, ಶಾರ್ಟ್ ಸರ್ಕ್ಯೂಟ್ ನಿಂದ ಈ ದುರದ ಸಂಭವಿಸಿದೆ ಎಂದು ಮಾಹಿತಿ ಬಂದಿದೆ ಎಂದರು.
ಲೋಕಸಭೆ ನಂತರ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆದ ಆಶ್ಚರ್ಯವಿಲ್ಲ- ಬೊಮ್ಮಾಯಿ
ಮಧ್ಯಾಹ್ನ 12:45ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.ಅಗ್ನಿ ಅವಘಡದಲ್ಲಿ ಸಿಲುಕಿದ್ದ 11 ಜನರನ್ನು ರಕ್ಷಿಸಲಾಗಿದೆ ಎಂದು ಆರ್ ಟಿ ನಗರದಲ್ಲಿ ಸಚಿವ ಭೈರತಿ ಸುರೇಶ್ ಈ ಕುರಿತಂತೆ ಹೇಳಿಕೆ ನೀಡಿದರು. ಎಂಟು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿರುವ ಮಾಹಿತಿ ಇದೆ. ಇದು ಖಾಸಗಿಯರಿಗೆ ಸೇರಿದ ಕಟ್ಟಡ ಬಾಡಿಗೆ ನೀಡಿದ್ದರು ಎಂದು ಆರ್ ಟಿ ನಗರದಲ್ಲಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.
ಶಿವಮೊಗ್ಗ: ಏಪ್ರಿಲ್.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಮೊದಲಿಗೆ ಡಿಜೆ ಸ್ಫೋಟಗೊಂಡು ಮಿರಾಕಲ್ ಡ್ರಿಂಕ್ಸ್ ನ ಗ್ರೌಂಡ್ ಫ್ಲೋರ್ ಕಚೇರಿಯಲ್ಲಿ ಬೆಂಕಿ ಉಂಟಾಗಿತ್ತು. ತದನಂತರ ಬೆಂಕಿಯ ಕೆನ್ನಾಲಿಗೆ ಎರಡೂ ಫ್ಲೋರ್ಗೂ ವ್ಯಾಪಿಸಿದೆ. ಬೆಂಕಿ, ಹೊಗೆಯಿಂದ ಕಟ್ಟಡದಿಂದ ಹೊರಬರಲು ಸಿಬ್ಬಂದಿ ಪರದಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಏಣಿ ಮೂಲಕ ಪಕ್ಕದ ಕಟ್ಟಡಕ್ಕೆ ಸಿಬ್ಬಂದಿಯನ್ನು ಸ್ಥಳಾಂತರಿಸಿದ್ದಾರೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಬೆಂಕಿಯ ಹೊಗೆಯಿಂದ ಉಸಿರಾಟದ ಸಮಸ್ಯೆಯಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.