ಮಂಗಳೂರು: ರಸ್ತೆಯಲ್ಲೇ ನಮಾಜ್ ಮಾಡಿದ್ದನ್ನು ಖಂಡಿಸಿ, ನಾವು ರಸ್ತೆಯಲ್ಲೇ ಹನುಮಾನ್ ಚಾಲೀಸಾ ಪಠಿಸೋದಾಗಿ ಹೇಳಿಕೆ ನೀಡಿದ್ದಂತ ವಿಹೆಚ್ ಪಿ ಮುಖಂಡ ಶರಣ್ ಪಂಪ್ವೇಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಗಳೂರು ರಸ್ತೆಯಲ್ಲೇ ನಮಾಜ್ ಮಾಡಿದಂತ ಪ್ರಕರಣ ಖಂಡಿಸಿ, ವಿಹೆಚ್ ಪಿ ಮುಖಂಡ ಶರಣ್ ಪಂಪ್ವೆಲ್ ರಸ್ತೆಯಲ್ಲೇ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿಕೆ ನೀಡಿದ್ದರು.
ಶರಣ್ ಪಂಪ್ವೆಲ್ ವಿರುದ್ಧ ಮಂಗಳೂರಿನ ಸಿಇಎನ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಶರಣ್ ಪಂಪ್ವೆಲ್ ವಿರುದ್ಧ ಐಪಿಸಿ ಸೆಕ್ಷನ್ 153(ಎ), 506ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಅಂದಹಾಗೇ ಮೇ.24ರಂದು ಕಂಕನಾಡಿ ಮಸೀದಿ ಬಳಿಯ ರಸ್ತೆಯಲ್ಲೇ ನಮಾಜ್ ಮಾಡಿದ್ದರು. ನಮಾಜ್ ಮಾಡಿದ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಾಗಿತ್ತು. ಈ ಘಟನೆ ಖಂಡಿಸಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿನ್ನಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
BREAKING: ‘ಕನ್ಯಾಕುಮಾರಿ’ಯಲ್ಲಿ 45 ಗಂಟೆಗಳ ‘ಧ್ಯಾನ’ ಆರಂಭಿಸಿದ ‘ಪ್ರಧಾನಿ ಮೋದಿ’ | PM Modi begins ‘dhyan’