ಬೆಂಗಳೂರು : ವಾಲ್ಮೀಕಿ ನಿಗಮದ ಖಾತೆಯಿಂದ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಇದೀಗ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಎನ್ನುವವರು ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಹೌದು 187.33 ನಿಗಮದ ಅಕೌಂಟಿಗೆ ವರ್ಗಾವಣೆ ಆಗಿದೆ. ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಎನ್ನುವವರು ಈ ಕುರಿತಂತೆ ದೂರು ನೀಡಿದ್ದಾರೆ. ನಿಗಮದ ಹೆಸರಿನಲ್ಲಿ ವಸಂತನಗರದಲ್ಲಿ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಇತ್ತು. ಫೆಬ್ರುವರಿ 19 ರಂದು ಖಾತೆಯನ್ನು ಎಂಜಿ ರೋಡ್ ಬ್ರಾಂಚ್ ಗೆ ವರ್ಗಾವಣೆ ಮಾಡಲಾಯಿತು.
ಫೆಬ್ರವರಿ 26ರಂದು ನಿಗಮದ ಎಂಡಿ ಲೆಕ್ಕಾಧಿಕಾರಿಗಳು ಸಹಿ ಪಡೆದುಕೊಂಡಿದ್ದಾರೆ.ಬ್ಯಾಂಕ್ ನವರು ನಿಗಮದ ಎಂಡಿ ಲೆಕ್ಕಾಧಿಕಾರಿಗಳು ಸಹಿ ಪಡೆದುಕೊಂಡಿದ್ದಾರೆ. ಬಳಿಕ ಸದರಿ ಖಾತೆಯಿಂದ ಮಾರ್ಚ್ 4ರಂದು 25 ಕೋಟಿ, ಮಾರ್ಚ್ 6ರಂದು 25 ಕೋಟಿ, ಮಾರ್ಚ್ 21 ರಂದು 44 ಕೋಟಿ ಹಣ ವರ್ಗಾವಣೆ ಆಗಿದೆ. ಅಲ್ಲದೆ ಮೇ 21ರಂದು 50 ಕೋಟಿ, ಮೇ 22 ರಂದು 33 ಕೋಟಿ ಹಣ ವರ್ಗಾವಣೆ ಆಗಿದೆ.ನಿಗಮದ ಬ್ಯಾಂಕ್ ಖಾತೆಯಿಂದ ಒಟ್ಟು 187.33 ಕೋಟಿ ಹಣ ವರ್ಗಾವಣೆ ಆಗಿದೆ.
ಯೂನಿಯನ್ ಬ್ಯಾಂಕಿನ ಎಂಡಿ ಹಾಗೂ ಸಿಇಓ ಮನೆಮೆಕಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮ ಸುಬ್ರಮಣ್ಯಂ, ಸಂಜಯ್ ರುದ್ರ ಪಂಕಜ್, ಸುಶೀತ ಸೇರಿದಂತೆ ಬ್ಯಾಂಕ್ ಆಡಳಿತ ಮಂಡಳಿಯವರ ವಿರುದ್ಧ FIR ದಾಖಲಾಗಿದೆ.ಬ್ಯಾಂಕ್ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ಹಣ ವರ್ಗಾವಣೆಯಾಗಿದೆ.ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.ಹಣ ವರ್ಗಾವಣೆ ಅಕ್ರಮದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಲ್ಲದೇ ರಾಜಕೀಯ ಪ್ರಭಾವಿಗಳು ಕೂಡ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.