ಬಳ್ಳಾರಿ: ದಾವಣಗೆರೆ ಟು ಬಳ್ಳಾರಿ ಮಾರ್ಗವಾಗಿ ಸಂಚರಿಸುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಎದುರಿನಿಂದ ಬಂದ ಕಾರೊಂದನ್ನು ಗಮನಿಸಿ ಎಡಭಾಗಕ್ಕೆ ತೆಗೆದುಕೊಂಡಂತ ವೇಳೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ತೆರಳುತ್ತಿದ್ದಂತ ಬೈಕ್ ಗೆ ತಾಗಿತ್ತು. ಇದನ್ನು ಗಮನಿಸದೇ ತೆರಳಿದಂತ ಬಸ್ ಅನ್ನು ಅಡ್ಡಗಟ್ಟಿ, ಕೆ ಎಸ್ ಆರ್ ಟಿ ಸಿ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದಂತ ಹೆಚ್ ಕಾನ್ ಸ್ಟೇಬಲ್ ವಿರುದ್ಧ FIR ದಾಖಲಾಗಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ KA17F1483 ಬಸ್ ದಾವಣಗೆರೆ – ಬಳ್ಳಾರಿ ಮಾರ್ಗದಲ್ಲಿ ಕಾರ್ಯಚಾರಣೆಯಲ್ಲಿದ್ದಾಗ ಗಜಾಪುರದ ಬಳಿ ( ಕೂಡ್ಲಿಗಿ ಹತ್ತಿರ ) ಎದುರಗಡೆಯಿಂದ ಬಂದ ಕಾರನ್ನು ಗಮನಿಸಿದ ಸಂಸ್ಥೆಯ ಚಾಲಕ ರಾಮಲಿಂಗಪ್ಪ ಅವರು ವಾಹನವನ್ನು ಎಡಗಡೆಗೆ ತೆಗೆದುಕೊಂಡಾಗ ಎಡಬಾಗದಲ್ಲಿ ಚಲನೆಯಲ್ಲಿದ್ದ ದ್ವಿಚಕ್ರ ವಾಹನಕ್ಕೆ ತಗುಲಿರುತ್ತದೆ. ಸದರಿ ದ್ವಿ ಚಕ್ರ ವಾಹನ ಸವಾರರು ಪೊಲೀಸ್ ಸಿಬ್ಬಂದಿಗಳಾಗಿರುವುದು ತಿಳಿದು ಬಂದಿರುತ್ತದೆ.
ಸದರಿ ದ್ವಿ ಚಕ್ರ ವಾಹನ ಸವಾರರು ಸಂಸ್ಥೆಯ ವಾಹನವನ್ನು ಮುಂದೆ ಬಂದು ಅಡ್ಡಗಟ್ಟಿ ಚಾಲಕ ರಾಮಲಿಂಗಪ್ಪ ಮೇಲೆ ಹಲ್ಲೆ ಮಾಡಿರುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೂಡಲೇ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿರುತ್ತಾರೆ ಎಂದು ಹೇಳಿದೆ.
ಈ ಹಿನ್ನಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ಅವರು ಖುದ್ದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತನಾಡಿ ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಕೋರಿರುತ್ತಾರೆ. ಅದರಂತೆ, ಹಲ್ಲೆ ಮಾಡಿದಂತ ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಮಂಜುನಾಥ ಎಂಬುವರ ಮೇಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲೇ FIR ದಾಖಲಿಸಲಾಗಿದೆ.
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು
SHOCKING : ಕರಾಚಿ `ಏರ್ ಪೋರ್ಟ್’ನಲ್ಲಿ `ಕಾಂಡೋಮ್ ಬಾಕ್ಸ್’ನಲ್ಲೇ ಊಟ ವಿತರಣೆ : ವಿಡಿಯೋ ವೈರಲ್ | WATCH VIDEO