ಹೆಲ್ಸಿಂಕಿ (ಫಿನ್ಲ್ಯಾಂಡ್): ಫಿನ್ಲ್ಯಾಂಡ್ನ ಪ್ರಧಾನಿ ಸನ್ನಾ ಮರಿನ್(Sanna Marin) ಪಾರ್ಟಿಯೊಂದರಲ್ಲಿ ಡಾನ್ಸ್ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು ಈ ಬೆನ್ನಲ್ಲೇ, ಮರಿನ್ ಡ್ರಗ್ಸ್(Drug)ಸೇವಿಸಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿತ್ತು. ಹೀಗಾಗಿ, ಅವರು ಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ವರದಿ ನೆಗೆಟಿವ್ ಬಂದಿದೆ ಎಂದು ಅವರ ವಿಶೇಷ ಸಲಹೆಗಾರರು ಸೋಮವಾರ ತಿಳಿಸಿದ್ದಾರೆ.
ಸನ್ನಾ ಮರಿನ್ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಕೇನ್, ಆಂಫೆಟಮೈನ್, ಗಾಂಜಾ ಮತ್ತು ಒಪಿಯಾಡ್ಗಳಂತಹ ವಿವಿಧ ಮಾದಕವಸ್ತುಗಳನ್ನು ಸೇವಿಸಿದ್ದಾರೆಯೇ ಎಂದು ಪರೀಕ್ಷಿಸಲಾಗಿತ್ತು. ಇದೀಗ ಅವರ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಪ್ರಧಾನಿಯ ವಿಶೇಷ ಸಲಹೆಗಾರ ಐಡಾ ವ್ಯಾಲಿನ್ ತಿಳಿಸಿದ್ದಾರೆ.
ಕಳೆದ ವಾರ ಸೋರಿಕೆಯಾದ ವೀಡಿಯೊದಲ್ಲಿ ಮರಿನ್ ಸ್ನೇಹಿತರೊಂದಿಗೆ ಭಾಗವಹಿಸಿದ್ದ ಪಾರ್ಟಿಯೊಂದರ ವಿಡಿಯೋ ವೈರಲ್ ಆಗಿತ್ತು.
BREAKING NEWS : ಈಶ್ವರ ದೇವರ ಜಾತ್ರೆಯಲ್ಲಿ `ವಿ.ಡಿ. ಸಾವರ್ಕರ್’ ಫೋಟೋ ಮೆರವಣಿಗೆ
ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಪತ್ನಿಯನ್ನು ತಳ್ಳಿ, ಇಬ್ಬರು ಮಕ್ಕಳೊಂದಿಗೆ ಎಸ್ಕೇಪ್ ಆದ ಪತಿ… Video