ಬೆಂಗಳೂರು: ಮೊನ್ನೆಯಷ್ಟೇ ರಾತ್ರಿ ಓಡಾಡುತ್ತಿದ್ದ ದಂಪತಿಯಿಂದ ದಂಡ ವಸೂಲಿ ಮಾಡಿ ಪೊಲೀಸರು ಅಮಾನತುಗೊಂಡ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ನಡೆದಿದೆ.
BIGG NEWS: ಬಿಬಿಎಂಟಿಸಿ ವಿಭಾಗದಲ್ಲಿ ಭ್ರಷ್ಟಾಚಾರ; 10 ಅಧಿಕಾರಿಗಳ ಅಮಾನತು
ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.ಆಡುಗೋಡಿ ಠಾಣೆ ಕಾನ್ಸ್ಟೇಬಲ್ಗಳಾದ ಅರವಿಂದ್ ಮತ್ತು ಮಾಳಪ್ಪ ಬಿ.ವಾಲಿಕಾರ್ ಅಮಾನತುಗೊಂಡಿದ್ದಾರೆ.
ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಪೇದೆಗಳು, ಹಣ ನೀಡುವಂತೆ ಹೇಳಿದ್ದಾರೆ.
BIGG NEWS: ಬಿಬಿಎಂಟಿಸಿ ವಿಭಾಗದಲ್ಲಿ ಭ್ರಷ್ಟಾಚಾರ; 10 ಅಧಿಕಾರಿಗಳ ಅಮಾನತು
ಇಲ್ಲದಿದ್ದರೆ ಎಫ್ಐಆರ್ ದಾಖಲು ಮಾಡ್ತೀವಿ ಎಂದು ಬೆದರಿಸಿದ್ದಾರೆ.ಪೊಲೀಸರ ಅವಾಜ್ಗೆ ಹೆದರಿದ ರತ್ನಾಕರ್ ಮತ್ತು ಚೀರಾಸ್, ಕಾನ್ಸ್ಟೇಬಲ್ಗಳಿಗೆ ಪರಿಚಿತರ ಟೀ ಅಂಗಡಿಯವರಿಂದ 4 ಸಾವಿರ ರೂ. ಹಣವನ್ನು ಫೋನ್ಪೇ ಮಾಡಿಸಿದ್ದಾರೆ. ಈ ಬಗ್ಗೆ ರತ್ನಾಕರ್ ಎಂಬಾತ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು.