ಚಾಮರಾಜನಗರ : ಆನೆಗೆ ತಿನ್ನಲು ಕಬ್ಬು ನೀಡಿದ ಲಾರಿ ಚಾಲಕನಿಗೆ ಅರಣ್ಯ ಇಲಾಖೆ 75 ಸಾವಿರ ದಂಡ ವಿಧಿಸಿದ ಘಟನೆ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಬಳಿ ನಡೆದಿದೆ.
ಮೈಸೂರು ಮೂಲದ ಲಾರಿ ಚಾಲಕ ಸಿದ್ದರಾಜು ಎಂಬುವವರು ಲಾರಿಯಲ್ಲಿ ಕಬ್ಬು ತುಂಬಿಕೊಂಡು ತಮಿಳುನಾಡಿಗೆ ಹೋಗುತ್ತಿದ್ದರು, ಹಾಸನೂರು ಬಳಿ ಕಾಡಾನೆಗೆ ಇವರು ಕಬ್ಬು ನೀಡಿದ್ದಾರೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸುಮ್ಮನಾಗದೇ 500-1000 ಅಲ್ಲ ಬರೋಬ್ಬರಿ 75, 000 ರೂ ದಂಡ ವಿಧಿಸಿದ್ದಾರೆ.
ನಿಯಮದ ಪ್ರಕಾರ ಸಂರಕ್ಷಿತಾರಣ್ಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವನ್ಯ ಜೀವಿಗಳಿಗೆ ತಿನ್ನಲು ಕೊಡುವುದು ಅಪರಾಧವಾಗಿದೆ. ಆದ್ದರಿಂದ ನಿಯಮದ ಪ್ರಕಾರ ಅರಣ್ಯ ಇಲಾಖೆ ಸಿಬ್ಬಂದಿ 75,000 ರೂ ದಂಡ ಕಟ್ಟಿಸಿಕೊಂಡಿದ್ದಾರೆ. ಮಾನವೀಯತೆ ದೃಷ್ಟಿಯಲ್ಲಿ ಆನೆಗೆ ತಿನ್ನಲು ಕಬ್ಬು ಕೊಟ್ಟ ಚಾಲಕ ಭಾರೀ ಮೊತ್ತದ ದಂಡ ಕಟ್ಟಿದ್ದಾರೆ.
BREAKING NEWS : ಬೆಂಗಳೂರಿನಲ್ಲಿ ಕಲ್ಲು ಎತ್ತಿಹಾಕಿ ಭಯಾನಕ ಮರ್ಡರ್ ಪ್ರಕರಣ : 6 ಮಂದಿ ಆರೋಪಿಗಳು ಅಂದರ್