ಮೂತ್ರಕೋಶದಲ್ಲಿ ಕಲ್ಲಾಗಿದ್ದರೆ ಈ ಸಸ್ಯ ಮೂಲಿಕೆಯನ್ನು ಮನೆ ಮದ್ದಾಗಿ ಬಳಸಿ. ಅದುವೇ ನೆಗ್ಗಿಲು ಗಿಡ. ಇದು ಮುಳ್ಳುಗಳಿಂದ ಕೂಡಿದ ಸಸ್ಯವಾಗಿದ್ದು, ಹೊಲದಲ್ಲಿ ಕಸದ ರೂದಲ್ಲಿ ಬೆಳೆಯುತ್ತದೆ. ಮಳೆಗಾಲದಲ್ಲಿಯೇ ಹೆಚ್ಚಾಗಿ ಬೆಳೆಯುವ ಗಿಡ ಇದಾಗಿದೆ. ಇನ್ನು ಈ ಗಿಡವನ್ನು ಹೇಗೆ ಗುರುತಿ ಹಿಡಿಯಬಹುದು ಎಂದರೆ ಇದರ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತವೆ. ಇದರ ಹೂವುಗಳು ಹಳದಿ ಬಣ್ಣದ್ದಾಗಿರುತ್ತವೆ. ಆರ್ಯುವೇದದ ಪ್ರಕಾರ ಈ ಗಿಡದ ಪ್ರತಿ ಭಾಗವೂ ಔಷಧಿ ಗುಣಗಳನ್ನು ಹೊಂದಿದೆ.
ಹೀಗಿರುವಾಗ ಕಿಡ್ನಿ ಸ್ಟೋನ್ ಸಮಸ್ಯೆಗೆ ಈ ಗಿಡ ಹೇಗೆ ಉಪಯೋಗಿಸಬಹುದು ಎಂದು ತಿಳಿದುಕೊಳ್ಳೋಣ.
ಮೊದಲಿಗೆ ಈ ಗಡದ ಹಣ್ಣು ಹಾಗು ಸೊಪ್ಪನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಪೇಸ್ಟ್ ರೂಪದಲ್ಲಿ ಮಾಡಿಕೊಳ್ಳಿ. ಇದಕ್ಕೆ ನಿಮಗೆ ಬೇಕೆನಿಸುವ ಪ್ರಮಾಣದಷ್ಟು ಬೆಲ್ಲ ಸೇರಿಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಹೀಗೆ ಸತತವಾಗಿ ಒಂದು ತಿಂಗಳು ಮಾಡಿದರೆ ಮೂತ್ರಕೋಶದಲ್ಲಿನ ಕಲ್ಲಿನ ಸಮಸ್ಯೆ ಪರಿಹಾರವಾಗುತ್ತದೆ.
ನೆಗ್ಗಿಲು ಗಿಡದ ಚೂರ್ಣವನ್ನು ಪುರುಷರು ಸೇವಿಸಿದರೆ ನರದೌರ್ಬಲ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಮೂರು ತಿಂಗಳು ಸೇವಿಸಬೇಕು. ಇದು ಮಹಿಳೆಯರ ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ. ಒಟ್ಟಾರೆ ಈ ಗಿಡದ ಹಣ್ಣಿನ ಸೇವನೆ ದೇಹದಲ್ಲಿ ಶಕ್ತಿ ನೀಡಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಾಮ ಉತ್ತೇಜನ ಕೆಲಸ ಮಾಡುತ್ತದೆ.
ಈ ಸೊಪ್ಪನ್ನು ಚೆನ್ನಾಗಿ ತೊಳೆದು ರಾತ್ರಿ ನೀರಿನಲ್ಲಿ ನೆನಸಿಟ್ಟು, ಬೆಳಗ್ಗೆ ಇದೇ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ದುರ್ವಾಸನೆ ಕಡಿಮೆಯಾಗುತ್ತದೆ.
ಹೀಗೆ ನೆಗ್ಗಿಲು ಗಿಡ ಅನೇಕ ಬಗೆಯ ಆರೋಗ್ಯಕರವಾದ ಲಕ್ಷಣಗಳಿದ್ದು, ನಿಮ್ಮ ವೈದ್ಯರ ಸಲಹೆ ಸೂಚನೆಯ ಮೇರೆಗೆ ಇದನ್ನು ಸೇವಿಸಿದರೆ ಉತ್ತಮ ಎಂದು ಸಲಹೆ ನೀಡುತ್ತೇವೆ.