ಕೋಲಾರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಾಲ್ಲೂಕಿನ ಮುದುವತ್ತಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ರು. ಈ ಕುರಿತು ಅಭಿವೃದ್ಧಿ ಕಾಮಗಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
BIG NEWS: ಮಠದ ಸಿಬ್ಬಂದಿ ವೇತನ ಚೆಕ್ಗೆ ಸಹಿ ಹಾಕಲು ಮುರುಘಾ ಶರಣರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಕೆರೆಯನ್ನು ಸರಿಯಾಗಿ ಸ್ವಚ್ಛಪಡಿಸಿಲ್ಲ. ನೀರು ನಿಲ್ಲುವ ವ್ಯವಸ್ಥೆಯನ್ನೂ ಸರಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆರೆಯಲ್ಲಿ ನೀರು ಖಾಲಿಯಾದ ಮೇಲೆ ಸ್ವಚ್ಛಪಡಿಸುತ್ತೇವೆ ಎಂದ ಅಧಿಕಾರಿಯ ಉತ್ತರವನ್ನು ಅವರು ಒಪ್ಪಲಿಲ್ಲ. ‘ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿ, ತಮಿಳು ಭಾಷೆಯಲ್ಲಿ ಬುದ್ಧಿ ಹೇಳಿದರು.
BIG NEWS: ಮಠದ ಸಿಬ್ಬಂದಿ ವೇತನ ಚೆಕ್ಗೆ ಸಹಿ ಹಾಕಲು ಮುರುಘಾ ಶರಣರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಕೆರೆ ಪರಿಶೀಲಿಸಿದ ನಂತರ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಸುಮಾರು 15 ನಿಮಿಷಗಳ ಕಾಲ ಗ್ರಾಮಸ್ಥರ ಜೊತೆಗೆ ಸ್ಥಳೀಯ ಸಮಸ್ಯೆಗಳು ಮತ್ತು ಕೆರೆಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.