ಬೆಂಗಳೂರು : ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಆರ್ಸಿಬಿ ಐಪಿಎಲ್ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿದೆ. ಆರ್ಸಿಬಿ ಗೆಲ್ಲುತ್ತಿದ್ದಂತೆ ಬೆಂಗಳೂರು, ತಮಕೂರು, ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಈ ನಡುವೆ ನಿನ್ನೆ ನಡೆದ ಮ್ಯಾಚ್ ಗು ಮುನ್ನ RCB ಅಭಿಮಾನಿಗಳು ಒಂದು ಲೆಕ್ಕಾಚಾರ ಹಾಕಿಕೊಂದಿದ್ರು.
ಏನಪ್ಪಾ ಅದು ಅಂದ್ರೆ ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಈ ಸಲ ಕಪ್ ನಮ್ದೆ ಎನ್ನಲು 18ರ ಲೆಕ್ಕಾಚಾರವನ್ನು ಮುಂದಿಟ್ಟಿದ್ದರು . ಈ ಲೆಕ್ಕಾಚಾರವು ಆರ್ಸಿಬಿ ಪರವಿರುವುದರಿಂದ ಕೊನೆಗೂ ರಾಯಲ್ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹಾಗಾದ್ರೆ ಅಂತಹ ಲೆಕ್ಕಾಚಾರ ಏನು ಅಂತೀರಾ ಮುಂದೆ ಓದಿ
ಅಂದರೆ ಈ ಬಾರಿ ನಡೆಯುತ್ತಿರುವುದು 18ನೇ ಸೀಸನ್ನ ಐಪಿಎಲ್. ವಿರಾಟ್ ಕೊಹ್ಲಿಯ ಜೆರ್ಸಿ ನಂಬರ್ 18. ಅಲ್ಲದೆ ಕೊಹ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಾರಂಭಿಸಿ 18 ವರ್ಷಗಳಾಗಿವೆ. ಅತ್ತ ಆರ್ಸಿಬಿ ಅಭಿಮಾನಿಗಳ ಕಪ್ ಗೆಲ್ಲುವ ಕಾಯುವಿಕೆ ಕೂಡ 18ನೇ ವರ್ಷಕ್ಕೆ ಕಾಲಿಟ್ಟಿದೆ. ಇದೆಲ್ಲದರ ಮಧ್ಯ 3+6+2+0+2+5 ಈ ಪ್ಯಾಟರ್ನ್ ಸಹ ಒಂದು. ಅಂದ್ರೆ 3ನೇ ಜೂನ್ 2025 ಎಂಬುದು ಇದರ ಅರ್ಥವಾಗಿದ್ದು, ಎಲ್ಲವನ್ನು ಕೂಡಿಸಿದರೆ 18 ಆಗುತ್ತೆ ಸೋ ಈ ಎಲ್ಲಾ ಸಂಖ್ಯೆಗಳು 18 ಆಗಿರುವುದರಿಂದ ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳ ಲೆಕ್ಕಾಚಾರ ಆಗಿತ್ತು ಅದರಂತೆ ಇದೀಗ RCB ಚೊಚ್ಚಲ ಐಪಿಎಲ್ ಟ್ರೊಫಿ ಎತ್ತಿ ಹಿಡಿದಿದೆ.