ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಕೊನೆಗೂ ಹುಲಿ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಹುಲಿ ನೋಡಲು ಗ್ರಾಮಸ್ಥರು ಕಿಕ್ಕಿರಿದು ಸೇರಿದ್ದಾರೆ. ಕೇಜ್ ನಲ್ಲಿ ಲಾಕ್ ಆಗುತ್ತಿದ್ದಂತೆ ಹುಲಿ ವಿಚಲಿತವಾಗಿ ಗರ್ಜಿಸಿದೆ.
ಕಳೆದ ಎರಡು ಮೂರು ತಿಂಗಳಿಂದ ಹುಲಿ ಆಗಾಗ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿತ್ತು ಇದೀಗ ಅರಣ್ಯ ಸಿಬ್ಬಂದಿಗಳು ಹುಲಿ ಸೆರೆಹಿಡಿದಿದ್ದು ದೆಪಾಪುರ ಗ್ರಾಮಸ್ಥರು ನೆಟ್ಟು ಉಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ








