ಮುಂಬೈ: ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಾಗ ಪತ್ನಿ ಮೇಲೆ ಕಾರು ಹತ್ತಿಸಿ ಎಸ್ಕೇಪ್ ಆಗಿದ್ದ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ(Kamal Kishor Mishra) ಅವರನ್ನಿ ಇಂದು ಬೆಳಗ್ಗೆ ಅರೆಸ್ಟ್ ಮಾಡಲಾಗಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 19 ರಂದು ಅಂಧೇರಿ (ಪಶ್ಚಿಮ) ದಲ್ಲಿರುವ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಪತಿ(ಕಮಲ್ ಕಿಶೋರ್ ಮಿಶ್ರಾ)ಯನ್ನು ಹುಡುಕುತ್ತಾ ಬಂದ ಪತ್ನಿಗೆ ಕಾರಿನಲ್ಲಿ ಕಿಶೋರ್ ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕಿಶೋರ್ ಕಾರು ಚಲಾಯಿಸಿ ಮುಂದೆ ಹೋಗಲು ಯತ್ನಿಸಿದಾಗ ಪತ್ನಿ ಕಾರಿನ ಕೆಳಗೆ ಸಿಲುಕಿಕೊಂಡಿದ್ದಾರೆ. ಆದ್ರೂ ಆತ ಕಾರನ್ನು ಆಕೆಯ ಮೇಲೆಯೇ ಹರಿಸಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಕಿಶೋರ್ ಅವರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Watch Video: ರಸ್ತೆ ಬದಿ ಬೀದಿ ದೀಪದ ಕೆಳಗೆ ಬಾಲಕಿಯ ಶಿಕ್ಷಣಭ್ಯಾಸ: ಹೃದಯಸ್ಪರ್ಶಿ ವಿಡಿಯೋ ವೈರಲ್