ಮುಂಬೈ: ಚಲನಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ(Kamal Kishor Mishra) ತನ್ನ ಪತ್ನಿಯ ಮೇಲೆ ಕಾರು ಹರಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಏನಿದು ಘಟನೆ?
ಅಕ್ಟೋಬರ್ 19 ರಂದು ಮುಂಬೈನ ಅಂಧೇರಿಯಲ್ಲಿ (ಪಶ್ಚಿಮ) ವಸತಿ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಂದು ಕಮಲ್ ಮಿಶ್ರಾ ಅವರ ಪತ್ನಿ ತನ್ನ ಪತಿಯನ್ನು ಹುಡುಕುತ್ತಾ ಹೊರಬಂದಾಗ ಪಾರ್ಕಿಂಗ್ ಪ್ರದೇಶದಲ್ಲಿ ಅವರ ಕಾರು ಇದ್ದದ್ದನ್ನು ನೋಡಿದ್ದಾರೆ. ನಂತ್ರ ಕಾರಿನ ಬಳಿ ಹೋಗಿ ನೋಡಿದಾಗ ಕಮಲ್ ಬೇರೊಬ್ಬ ಮಹಿಳೆಯೊಂದಿಗೆ ಇರುವುದನ್ನು ಪತ್ನಿ ನೋಡಿದ್ದಾರೆ. ಪತ್ನಿಯನ್ನು ಕಂಡ ಕೂಡಲೇ ಕಮಲ್ ಕಾರು ಚಲಾಯಿಸು ಪ್ರಾರಂಭಿಸಿದ್ದಾರೆ. ಪತ್ನಿ ಎಷ್ಟೇ ತಡೆದರೂ ಕಮಲ್ ಆಕೆಯ ಮೇಲೆ ಕಾರು ಹರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
#WATCH | Case registered against film producer Kamal Kishore Mishra at Amboli PS u/s 279 & 338 of IPC for hitting his wife with a car.She claims after the incident she suffered head injuries.We’re searching for accused. Further investigation underway:Amboli Police
(CCTV Visuals) pic.twitter.com/0JSleTqyry
— ANI (@ANI) October 26, 2022
ಘಟನೆ ವೇಳೆ ಕಮಲ್ ಪತ್ನಿ ಕಾಲುಗಳು, ಕೈ ಮತ್ತು ತಲೆಗೆ ಗಾಯಗಳಾಗಿವೆ. ಈ ಸಂಬಂಧ ಪತ್ನಿ ಪತಿ ಕಮಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ, ಕಮಲ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ 279 (ಅಪವೇಗದ ಚಾಲನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಸೇರಿದಂತೆ ಅಂಬೋಲಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇನ್ನೂ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಮಲ್ ಮಿಶ್ರಾ ಹಿಂದಿಯ ‘ದೇಹತಿ ಡಿಸ್ಕೋ’ ಚಿತ್ರದ ನಿರ್ಮಾಪಕರು.
BIG NEWS : ʻರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿಲ್ಲಿಸಿʼ: ಇರಾನ್ಗೆ ಯುಎಸ್ ಕರೆ
BIG NEWS: ಮಹಾರಾಷ್ಟ್ರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ: ಮೂವರು ಕಾರ್ಮಿಕರ ದುರ್ಮರಣ, 12 ಮಂದಿಗೆ ಗಾಯ
BIG NEWS: ಉಕ್ರೇನ್ಗೆ ಮತ್ತೆ ಕಾದಿದ್ಯಾ ಆಪತ್ತು?: ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ ರಷ್ಯಾ | WATCH VIDEO
BIG NEWS : ʻರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿಲ್ಲಿಸಿʼ: ಇರಾನ್ಗೆ ಯುಎಸ್ ಕರೆ