ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಸ್ಟೇಡಿಯಂನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಎಫ್ಐಎಚ್ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ನ ಎರಡನೇ ಪಂದ್ಯದಲ್ಲಿ ಭಾರತವು ಬಲಿಷ್ಠ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಿತು.
ಭಾರತ 3-1 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಭಾರತದ ಭರವಸೆ ಜೀವಂತವಾಗಿದೆ. ಭಾರತದ ಪರ ಸಂಗೀತಾ ಕುಮಾರಿ ಮೊದಲ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಒಂಬತ್ತನೇ ನಿಮಿಷದಲ್ಲಿ ಮೇಗನ್ ಹಲ್ ಗೋಲು ಬಾರಿಸಿ ಸಮಬಲ ಸಾಧಿಸಿದರು. ಭಾರತ ತಂಡ ಇಂದು ಆಕ್ರಮಣಕಾರಿ ಶೈಲಿಯಲ್ಲಿ ಆಡುತ್ತಿದೆ. ಮೊದಲ ಕ್ವಾರ್ಟರ್ನಲ್ಲಿ ಭಾರತ ಎಲ್ಲಾ ಮೂರು ಗೋಲುಗಳನ್ನು ಗಳಿಸಿತು.